ಸುದೀಪ್ ಹುಡುಗಿ ಬಗ್ಗೆ ಮಾತನಾಡ್ತಿದ್ದಂಗೆ ನಾಚಿ ನೀರಾದ ಹನುಮಂತ

0
Spread the love

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಗ್ರ್ಯಾಂಡ್ ಫಿನಾಲೆಗೆ ಕೆಲವೇ ನಿಮಿಷಗಳು ಮಾತ್ರವೇ ಭಾಕಿ ಇದೆ.  ಇಂದು ಸಂಜೆ 6 ಗಂಟೆಯಿಂದ ಬಿಗ್​ಬಾಸ್​ ಗ್ರ್ಯಾಂಡ್ ಫಿನಾಲೆ ಆರಂಭವಾಗುತ್ತಿದ್ದು, ಫೈನಲಿಸ್ಟ್​ ಆಗಿ 6 ಸ್ಪರ್ಧಿಗಳು ಹೊರ ಹೊಮ್ಮಿದ್ದಾರೆ. ಇವರಲ್ಲಿ ಬಿಗ್ ಬಾಸ್ ಟ್ರೋಪಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಶುರುವಾಗಿದೆ.

Advertisement

ಈ ಮಧ್ಯೆ ಇದು ಕಿಚ್ಚ ಸುದೀಪ್ ಅವರ ಕೊನೆಯ ಬಿಗ್ ಶೋ ಆಗಿದೆ. ಹೀಗಾಗಿ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ಈ ಮಧ್ಯೆ ಕಲರ್ಸ್​ ಕನ್ನಡ ಗ್ರ್ಯಾಂಡ್​ ಫಿನಾಲೆಯ ಎರಡನೇ ಪ್ರೋಮೋ ರಿಲೀಸ್​ ಆಗಿದೆ. ರಿಲೀಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಎಲ್ಲರಿಗೂ ಗ್ರ್ಯಾಂಡ್​ ಫಿನಾಲೆಗೆ ವೆಲ್​ಕಮ್​ ಹೇಳಿದ್ದಾರೆ. ವೇದಿಕೆಯ ಮುಂಬಾಗ ಸೀಸನ್ 11ರ ಅಷ್ಟೂ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಅಲ್ಲದೇ ಬಿಗ್​ಬಾಸ್​ ಫೈನಲಿಸ್ಟ್​ ಸ್ಥಾನದಲ್ಲಿರೋ 6 ಸ್ಪರ್ಧಿಗಳ ಕುಟುಂಬಸ್ಥರು ಕೂಡ ಹಾಜರಾಗಿದ್ದಾರೆ.

ಸದ್ಯ ರಿಲೀಸ್ ​ ಆಗಿರೋ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಹನುಮಂತನ ಜೊತೆಗೆ ಪೋಷಕರಿಗೂ ಶಾಕ್ ಕೊಟ್ಟಿದ್ದಾರೆ. ಹನುಮಂತೂ ಫಿನಾಲೆ ವೀಕ್​ಗೆ ಬಂದು ಕುಳಿತುಕೊಂಡಿದ್ದೀರಾ ನಿಮ್ಮ ಹುಡುಗಿಗೆ ಎಷ್ಟು ಖುಷಿ ಆಗಿರಬೇಕು ಎಂದಿದ್ದಾರೆ. ಆಗ ಹನುಮಂತ ಹುಡುಗಿ ಎಂಬ ಪದ ಹೇಳುತ್ತಿದ್ದಂತೆ ನಾಚಿ ನೀರಾಗಿದ್ದಾರೆ. ಆಗ ಕಿಚ್ಚ ಹನುಮನ ಪೋಷಕರಿಗೆ ಏನಮ್ಮ ನಿಮಗೆ ಒಪ್ಪಿಗೆ ಇಲ್ವಾ ಅಂತ ಕೇಳಿದ್ದಾರೆ. ಆಗ ಹನುಮಂತನ ತಾಯಿ ಇಲ್ಲ ರೀ ಎಂದಿದ್ದಾರೆ. ಆಗ ಕಿಚ್ಚ ಅವರು ಹೆಣ್ಣನ್ನು ನೋಡಿದ್ದಾರೆ, ನೀವುಗಳು ಹಿಂಗೆ ಗಲಾಟೆ ಮಾಡಿದ್ರೆ ಆಮೇಲೆ ಗಂಡನ್ನೇ ನೋಡಿ ಬಿಡ್ತಾರೆ ಅಂತ ಶಾಕ್​ ಕೊಟ್ಟಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಎಲ್ಲರೂ ಬಿಕ್ಕಿ ಬಿಕ್ಕಿ ನಕ್ಕಿದ್ದಾರೆ.


Spread the love

LEAVE A REPLY

Please enter your comment!
Please enter your name here