ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 1 ವರ್ಷದ ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಖಾಂತ್ಯ ಕಂಡಿದೆ. ನಿನ್ನೆ ಬೆಳಿಗ್ಗೆ 11-30 ರ ಸುಮಾರಿಗೆ ವಾರ್ಡ್ ನಂಬರ್ 123 ರ ಬಳಿಯಿಂದ ಅಪರಿಚಿತ ವ್ಯಕ್ತಿ ಮಗುವನ್ನು ಎತ್ತೊಯ್ದಿದ್ದನು. ನಂತರ ಇಂದು ಮದ್ಯಾಹ್ನ 1-30 ರ ಸುಮಾರಿಗೆ ಜಿಲ್ಲಾಸ್ಪತ್ರೆಗೆ ಬಂದ ಅನಾಮಿಕ ಮಗುವನ್ನು ಒಪ್ಪಿಸಿದ್ದಾನೆ.
Advertisement
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಹರಿಜನ ಎಂಬ ವ್ಯಕ್ತಿಯು ಮಗುವನ್ನು ಆಟವಾಡಿಸಲು ಎತ್ತುಕೊಂಡಿದ್ದಾಗ ಕಾಲ್ ಬಂದಿತ್ತು. ಮಾತನಾಡುತ್ತಾ ಹಾಗೇ ಮಗುವನ್ನು ಕರೆದುಕೊಂಡು ಹೋದೆ ಎಂದು ಆರೋಪಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಸದ್ಯ ಮಗು ತಾಯಿಯ ಮಡಿಲು ಸೇರಿದ್ದು, ರವಿ ಹರಿಜನ ಎಂಬುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಗುವಿನ ಅಪಹರಣ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.