ಮಹಾತ್ಮರ ಆಶೀರ್ವಾದದಿಂದ ಸುಖಮಯ ಜೀವನ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮ ಜೀವನ ಸುಖಮಯವಾಗಿ ಸಾಗಬೇಕಾದರೆ ನಮಗೆ ಸಂತರ, ಶರಣರ, ಮಹಾತ್ಮರ ಆಶೀರ್ವಾದ ಬೇಕು. ಮಹಾತ್ಮರ ಕೃಪೆಯಿಲ್ಲದೆ ಯಾವ ಕಾರ್ಯವೂ ಸಾಧ್ಯವಿಲ್ಲ ಎಂದು ಕಾನೂನು, ಸಂಸದೀಯ, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ವೀರಪ್ಪಜ್ಜನವರ ಮಠದಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲ ಎಂಬುದನ್ನು ತಿಳಿದು ನನಗೆ ತುಂಬಾ ಸಂತೋಷವಾಯಿತು. ಇಂತಹ ಮಠಗಳಿಂದಲೇ ನಮ್ಮಲ್ಲಿ ಇನ್ನೂ ಸಾಮರಸ್ಯ ಉಳಿದುಕೊಂಡಿದೆ ಎಂದು ಹೇಳಿದರು.

ಶ್ರೀ ವೀರಪ್ಪಜ್ಜನವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ಅವರ ನುಡಿಗಳಲ್ಲಿ ಅಷ್ಟೊಂದು ಅರ್ಥ ಮತ್ತು ಶಕ್ತಿ ಇದೆ. ಇಲ್ಲಿನ ಅಬ್ಬಿಗೇರಿ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಗುಡಿಯಲ್ಲಿ ಶ್ರೀ ವೀರಪ್ಪಜ್ಜನವರು ಕೆಲವು ಕಾಲ ವಾಸವಾಗಿದ್ದರು. ಈ ಶತಮಾನೋತ್ಸವದ ಸಂದರ್ಭದಲ್ಲಿ ಶ್ರೀ ವೀರಪ್ಪಜ್ಜನವರು ವಾಸಿಸಿದ್ದ ಈ ದೇವಸ್ಥಾನವನ್ನು ಸರಕಾರದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವದೆಂದು ಸಚಿವರು ಘೋಷಿಸಿದರು.

ಪುಣ್ಯಾರಾಧನೆಯ ಶತಮಾನೋತ್ಸವದ ಸ್ಮರಣ ಸಂಚಿಕೆ `ಹಠಯೋಗಿ’ಯನ್ನು ಉದಯವಾಣಿ ಪತ್ರಿಕೆ ಹೊರತಂದ ವಿಶೇಷ ಸಂಚಿಕೆಯನ್ನು ಸಚಿವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಡಾ. ವಿಶ್ವನಾಥ ಸ್ವಾಮೀಜಿ, ಜಿ.ಎಸ್. ಪಾಟೀಲ, ಮುಖಂಡ ಟಿ.ಈಶ್ವರ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನಮಠ, ಮುಖಂಡ ಮಿಥುನ ಪಾಟೀಲ, ಡಾ. ಕೆ.ಬಿ. ಧನ್ನೂರ, ಸಂಪಾದಕರಾದ ಬಸವರಾಜ ಜಾಲೀಹಾಳ, ದಿಲೀಪ ಮುಗಳಿ ಮುಂತಾದವರು ಉಪಸ್ಥಿತರಿದ್ದರು.

ಶಿವನಗೌಡ ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ, ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು.

ಶ್ರೀ ವೀರಪ್ಪಜ್ಜನವರನ್ನು ಹುಚ್ಚೀರಪ್ಪಜ್ಜ ಎಂದು ಕರೆಯುವುದನ್ನು ಇಂದಿನಿಂದ ಬಿಡುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು. ಅಷ್ಟೇ ಅಲ್ಲದೆ ಇನ್ನು ಮುಂದೆ ಹುಚ್ಚೀರಪ್ಪಜ್ಜ ಎಂದು ಕರೆದವರಿಗೆ ದಂಡವನ್ನು ವಿಧಿಸಬೇಕೆಂದು ಸಚಿವ ಎಚ್.ಕೆ. ಪಾಟೀಲ ಪ್ರತಿಪಾದಿಸಿದರು.


Spread the love

LEAVE A REPLY

Please enter your comment!
Please enter your name here