ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ನಿಡಗುಂದಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಶ್ರಮಿಸಿದ ಗ್ರಾಮಸ್ಥರಿಗೆ ತಾ.ಪಂ ಮಾಜಿ ಸದಸ್ಯ, ಗಜೇಂದ್ರಗಡ ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಅಂದಪ್ಪ ಬಿಚ್ಚೂರ ಧನ್ಯವಾದ ಸಲ್ಲಿಸಿದರು.
ಅವರು ಶನಿವಾರ ನಿಡಗುಂದಿ ಗ್ರಾಮದ 4ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಯ ವಿಜಯೋತ್ಸವದ ನಂತರ ಮಾತನಾಡಿದರು.
ಈ ಹಿಂದೆ ಇದೇ ವಾರ್ಡಿಗೆ ಮರ್ತುಜಾ ಖಾಧರ ಮುಲ್ಲಾ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಿತ್ತು. ಗ್ರಾಮಸ್ಥರು ಒಗ್ಗಟ್ಟಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಇಮಾಮಸಾಬ ಮದರಸಾಬ ಬಾಗವಾನ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರವಾಗಿ ಎಂದರು.
ಗ್ರಾಮಸ್ಥರ ನಿರ್ಧಾರಕ್ಕೆ ಶಾಸಕ ಜಿ.ಎಸ್. ಪಾಟೀಲ ಅಭಿನಂದನೆ ಸಲ್ಲಿಸಿದ್ದು, ಗ್ರಾಮೀಣ ಭಾಗಗಳಲ್ಲಿ ಏಕತೆ, ಸಹೋದರತೆಗೆ ಇದು ಮಾದರಿಯಾಗಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗೀತಾ ಕುಕನೂರ, ಉಪಾಧ್ಯಕೆ ಕವಿತಾ ಪೂಜಾರ, ವೀರಪ್ಪ ಬಿಚ್ಚೂರ, ಶಿವಣ್ಣ ಸೂಡಿ, ಶಶಿಧರ ಹೊಟ್ಟಿನ, ಅಂದಪ್ಪ ಚಲವಾದಿ, ಫಕ್ಕೀರಪ್ಪ ಕುಕನೂರ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯರ್ಕರು, ಗ್ರಾಮಸ್ಥರು ಉಪಸ್ಥಿತರಿದ್ದರು.