ಚಿಕ್ಕಬಳ್ಳಾಪುರ:- ಬೆತ್ತಲೆ ವಿಡಿಯೋ ತೋರಿಸಿ ಹೀಗೆ ಮಾಡು ಅಂತ ಕಿರುಕುಳ ಕೊಡುತ್ತಿದ್ದ ವಿಕೃತ ಕಾಮುಕ ಗಂಡನ ವಿರುದ್ಧ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟ ನಗರದ ಪಿಲೇಚರ್ಸ್ ಕ್ವಾರ್ಟರ್ಸ್ ನಲ್ಲಿ ಘಟನೆ ಜರುಗಿದೆ. ಎಸ್.ಮೊಸಿನ್ ಪಾಷ ಎಂಬಾತ ಹೆಂಡತಿಯ ಜೊತೆ ವಿಕೃತವಾಗಿ ವರ್ತಿಸಿದ್ದು, ಆತನ ಕಿರುಕುಳಕ್ಕೆ ಆತನ ತಾಯಿ ಕೂಡ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ.
ಇನ್ನು ಇವರಿಗೆ ಮದುವೆಯಾಗಿ 3 ಮುದ್ದಾದ ಹೆಣ್ಣು ಮಕ್ಕಳಿವೆ. ಆದರೂ ಆತನಿಗೆ ಪತ್ನಿಯ ಜೊತೆ ವಿಕೃತ ಕಾಮದಾಟವಾಡುವ ಹುಚ್ಚುತನ. ಇನ್ನು ಲೈಂಗಿಕ ಜಾಲತಾಣಗಳ ವೀಡಿಯೋ, ಪೋಟೋಗಳನ್ನು ಪತ್ನಿಗೆ ತೋರಿಸಿ ಹಾಗೆ ಮಾಡು, ಹೀಗೆ ಮಾಡು ಎಂದು ವಿಕೃತ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಸಾಲದೆಂಬಂತೆ ಪತ್ನಿಯ ಏಕಾಂತ ಪೋಟೋ, ವೀಡಿಯೋಗಳನ್ನು ತೆಗೆದು ಅವುಗಳನ್ನು ಮಾರಾಟ ಮಾಡುವುದಾಗಿ ಪತ್ನಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದ.
ತನ್ನ ವಿಕೃತ ಲೈಂಗಿಕ ಕಿರುಕುಳಕ್ಕೆ ಪತ್ನಿ ಸಾಥ್ ನೀಡುತ್ತಿಲ್ಲವೆಂದು ಪತ್ನಿಯ ಎದುರಲ್ಲೆ ಬೇರೆ ಮಹಿಳೆಯ ಜೊತೆ ವೀಡಿಯೋ ಕಾಲ್ ಮಾಡಿ ವಿಕೃತ ಆನಂದ ಪಡುತ್ತಿದ್ದ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ ಕೊಲೆ ಯತ್ನ ಮಾಡಿದ ಘಟನೆ ನಡೆದಿದೆ.
ಇನ್ನು ಮೊಸಿನ್‍ಪಾಷ ಪತ್ನಿ, ಈತನ ಅತಿಯಾದ ಲೈಂಗಿಕ ಕಿರುಕುಳಕ್ಕೆ ಸ್ಪಂದಿಸದೇ ಇದ್ದಾಗ, ಪತ್ನಿಯ ಋತುಚಕ್ರಕ್ಕೂ ಪಾಪಿ ಅಡ್ಡಿಪಡಿಸುತ್ತಿದ್ದನಂತೆ. ಪತ್ನಿ ಋತುಚಕ್ರವಾದಾಗ ತನ್ನ ಅಭಿಲಾಷೆ ತೀರಿಸುವಂತೆ ಕಿರುಕುಳ ಕೊಡುತ್ತಿದ್ದನಂತೆ.
ಬೆಂಗಳೂರಿನಲ್ಲಿ ತನಗೆ ತಿಳಿದಿರುವ ಆಪ್ರಿಕನ್ನರಿದ್ದಾರೆ. ಅವರಿಗೆ 40 ಸಾವಿರ ರೂಪಾಯಿಗೆ ಪತ್ನಿಯನ್ನು ಮಾರಾಟ ಮಾಡಿರುವುದಾಗಿ ಪತ್ನಿಗೆ ಬ್ಲಾಕ್‍ಮೇಲ್ ಮಾಡುತಿದ್ದನಂತೆ.
ಅಕ್ಕಪಕ್ಕದ ಮನೆಯ ಯುವತಿಯರ, ಹೆಂಗಸರ ಮೊಬೈಲ್ ನಂಬರ್ ಗಳನ್ನು ತಂದುಕೊಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಳೆದ 2024 ಜುಲೈ 26 ರಂದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಗಂಡನ ಹಲ್ಲೆ ಹಾಗೂ ಕಿರುಕುಳದಿಂದ ಬಚಾವ್ ಆಗಿರುವ ಆತನ ಪತ್ನಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸು ಶಿಡ್ಲಘಟ್ಟಕ್ಕೆ ಆಗಮಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.