ಬೆಂಗಳೂರು:- ರಾಜಕಾರಣಿಗಳ ಜೊತೆ ಮಲಗುವಂತೆ ನಿತ್ಯ ಕಿರುಕುಳ ನೀಡುತ್ತಿದ್ದ ಸೈಕೋ ಗಂಡನ ಕಿರುಕುಳ ತಾಳಲಾರದೇ ಪತ್ನಿಯೋರ್ವರು ಠಾಣೆ ಮೆಟ್ಟಿಲೇರಿದ್ದಾರೆ.
ರಾಜಕಾರಣಿಗಳೊಂದಿಗೆ ಮಲಗುವಂತೆ ಪತಿಯ ಒತ್ತಾಯ ಹಾಗೂ ಅತ್ತೆ ಮಾವ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಸಹಿಸಲಾಗದೇ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಪತ್ನಿ ದೂರಿನ ಹಿನ್ನೆಲೆ ಸೈಕೋ ಪತಿ ಯೂನಿಸ್ ಪಾಷಾ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ರಾಜಕಾರಣಿಗಳು, ಸಹಚರರ ಜೊತೆ ಮಲಗುವಂತೆ ನನ್ನ ಪತಿ ಒತ್ತಾಯಿಸುತ್ತಾರೆ. ಒಪ್ಪದಿದ್ದಕ್ಕೆ ಈಗಾಗಲೇ 6 ಬಾರಿ ತಲಾಖ್ ನೀಡಿದ್ದಾನೆ. ಜೊತೆಗೆ ಗರ್ಭಪಾತ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತಲೆಗೆ ಗನ್ ಇಟ್ಟು ಬೆದರಿಕೆ ಹಾಕುತ್ತಾನೆ. ಪತ್ನಿ ಮನೆಯವರಿಗೆಲ್ಲ ಮಚ್ಚು, ಲಾಂಗ್ ತೋರಿಸಿ ಬೆದರಿಸುತ್ತಾನೆ ಎಂದು ಆರೋಪಿಸಿದ್ದಾರೆ.
ಪತಿ ಮಾತ್ರವಲ್ಲ, ಅತ್ತೆ, ಮಾವ ಕೂಡ ವರದಕ್ಷಿಣೆಗಾಗಿ ನಿರಂತರ ಟಾರ್ಚರ್ ನೀಡುತ್ತಾರೆ. ಮಾವ ಮಸಾಜ್ ಮಾಡುವಂತೆ ಕೇಳುತ್ತಾರೆ ಎಂದು ಪತಿ, ಅತ್ತೆ ಹಾಗೂ ಮಾವನ ಮೇಲೆ ಸಾಲು ಸಾಲು ಆರೋಪಗಳನ್ನು ಹೊರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾರೆ.