ಬೆಂಗಳೂರು:- ಮದುವೆ ಆಗುವಂತೆ ಮಾವ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಬೇಸತ್ತು ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
Advertisement
ನವೆಂಬರ್ 11 ರಂದು ನಗರದ ಶೆಟ್ಟಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ 28 ವರ್ಷದ ಮಾವ ಸ್ವಾಗತ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಯುವತಿಯನ್ನ ಮದುವೆ ಮಾಡಿಕೊಳ್ಳುವಂತೆ ಪಿಡಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ನೀನು ನಾನು ಹೇಳಿದ ಹಾಗೆ ಕೇಳದಿದ್ದರೆ ನಿನಗೊಂದು ಗತಿ ಕಾಣಿಸುತ್ತೇನಿ. ನೀನು ನನ್ನ ಮಾತು ಕೇಳದಿದ್ದರೆ ಎಲ್ಲಿಯಾದರೂ ಹೋಗಿ ಸಾಯಿ ಎಂದು ಪ್ರಚೋದಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಯುವತಿ ಮನನೊಂದು ನೇಣು ಹಾಕಿಕೊಂಡು ಮೃತಪಟ್ಟ ಬಗ್ಗೆ ತಾಯಿ ರಾಧ ಪೊಲೀಸರಿಗೆ ದೂರು ನೀಡಿದ್ದಾರೆ.