ಗದಗ: ಅಕ್ಕನಿಗೆ ಕಿರುಕುಳ ಕೊಡುತ್ತಿದ್ದ ಬಾವನನ್ನು ಡೀಸೆಲ್ ಹಾಕಿ ತಮ್ಮಕೊಲ್ಲಲು ಯತ್ನಿಸಿ , ವಿಫಲವಾದ್ದರಿಂದ ಚಾಕುವಿನಿಂದ ಇರಿದ ಘಟನೆ ಗದಗ ರೋಣ ಪಟ್ಟಣದಲ್ಲಿ ನಡೆದಿದೆ.
ಜಗದೀಶ್ ಎಂಬ ವ್ಯಕ್ತಿ ಗಾಯಾಳುವಾಗಿದಾನೆ. ಬಸವರಾಜ್ ಎಂಬಾತನಿಂದ ಕೃತ್ಯ ನಡೆದಿದೆ. ಬಸವರಾಜ್ ಎಂಬ ಯುವಕನ ಅಕ್ಕನೊಂದಿಗೆ ಆರು ತಿಂಗಳ ಹಿಂದೆ ಪ್ರೀತಿ ಮಾಡಿ ಜಗದೀಶ್ ಮದುವೆ ಆಗಿದ್ದನು.
ಪ್ರೀತಿ ಮಾಡಿ ಮದುವೆಯಾದ ಯುವತಿ ಜೊತೆ ರಾಕ್ಷಸ ವರ್ತನೆ ತೋರಲು ಪ್ರಾರಂಬಿಸಿದನು. ಇದರಿಂದ ತವರು ಮನೆಗೆ ಯುವತಿ ಓಡಿ ಬಂದಿದ್ದಳು.
ಹಿರಿಯರ ಸಮ್ಮುಖದಲ್ಲಿ ಯುವಕ, ಯುವತಿ ಪ್ರತ್ಯೇಕವಾಗಿ ಎರಡು ಕುಟುಂಬಗಳು ಒಬ್ಬರ ತಂಟೆಗೆ ಬರದಂತೆ ತಾಕೀತು ಮಾಡಿದ್ದರು. ಆದ್ರೂ ನಿತ್ಯ ಕುಡಿದು ಬಂದು ಯುವತಿ ಹಾಗೂ ಕುಟುಂಬಸ್ಥರಿಗೆ ಜಗದೀಶ್ ಕಿರುಕುಳ ಕೊಡುತ್ತಿದ್ದನು.
ಜಗದೀಶ್ ನ ಕಿರುಕುಳಕ್ಕೆ ಬೇಸತ್ತು ಯುವತಿ ಸಹೋದರ ಬಸವರಾಜ್ ಹಲ್ಲೆ ಮಾಡಿದ್ದಾನೆ. ಬಸವರಾಜ್ ನ ಮೇಲೂ ಜಗದೀಶ್ ನಿಂದ ಹಲ್ಲೆ ಮಾಡಿರುವ ಆರೋಪ ಇದ್ದು, ಜಗದೀಶ್ ಗೆ ತಲೆ, ಕೈಗೆ ಗಂಭೀರ ಗಾಯ, ಬಸವರಾಜ್ ನಿಗೆ ಕೈಗೂ ಗಂಭೀರ ಗಾಯಗಳಾಗಿದ್ದು, ಇಬ್ಬರು ಗಾಯಾಳುಗಳಿಗೆ ಈಗ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.