ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರಿಪ್ರಿಯಾ: ವಿಶೇಷ ಫೋಟೋ ಹಂಚಿಕೊಂಡ ನಟಿ

0
Spread the love

ಮೊದಲ ಮಗುವಿನ ಆಗಮನದ ಖುಷಿಯಲ್ಲಿರುವ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಮ್ಮನ ಮಡಿಲಲ್ಲಿ ನಿದ್ದೆ ಮಾಡುತ್ತಿರುವ ಫೋಟೋ ಶೇರ್ ಮಾಡಿದ ನಟಿ ಅದಕ್ಕೆ ಮುದ್ದಾದ ಕ್ಯಾಪ್ಷನ್ ಕೂಡ ನೀಡಿದ್ದಾರೆ.

Advertisement

ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ ಎಂದು ನಟಿ ಬರೆದುಕೊಂಡಿದ್ದಾರೆ. ಮನೆಗೆ ಆಗಮಿಸಲಿರುವ ಕಂದನ ಮೇಲಿನ ಮತ್ತು ಅಮ್ಮನ ಮೇಲಿನ ಮಮತೆಯನ್ನು ಈ ಫೋಟೋ ಮೂಲಕ ಹರಿಪ್ರಿಯಾ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳ ಕಾಲ ಪ್ರೀತಿ ಮಾಡಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕಳೆದ ವರ್ಷ ಜ.26ರಂದು ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.  ವಸಿಷ್ಠ ಸಿಂಹ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ನವೆಂಬರ್ 1ರಂದು ವಸಿಷ್ಠ ಸಿಂಹ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಮದುವೆಯ ಬಳಿಕ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿರುವ ನಟಿ ಇದೀಗ ಮೊದಲ ಮಗುವಿನ ಆಗಮನಕ್ಕೆ ಎದುರು ನೋಡ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here