ಸ್ಯಾಂಡಲ್ ವುಡ್ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ದೀಪಾವಳಿ ಹಬ್ಬದ ದಿನವೇ ತಾವು ಫೋಷಕರಾಗುತ್ತಿರುವ ಸಿಹಿ ಸುದ್ದಿ ತಿಳಿಸಿದ್ದ ಈ ಜೋಡಿ ಇದೀಗ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿದೆ.
ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಗರ್ಭಿಣಿ ಹಾಗೇ ಹಾಣಿಸಿಕೊಂಡಿದ್ದರು. ಇದಾದ ಬಳಿಕ ಖುದ್ದು ಈ ಖುಷಿ ಸುದ್ದಿಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿತ್ತು. ಮೊದಲು ಮಾಲ್ಡೀವ್ಸ್ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿರುವ ಸಿಂಹಪ್ರಿಯಾ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಜೋಡಿ ತಿಳಿಸಿದ್ದರು.
ಇದೀಗ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ. ಸ್ಯಾಂಡಲ್ವುಡ್ ಸ್ಟಾರ್ಗಳು, ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸೀಮಂತ ಸಮಾರಂಭ ನಡೆದಿದೆ. ಇನ್ನೂ, ನಟಿ ಹರಿಪ್ರಿಯ ಸೀಮಂತ ಕಾರ್ಯಕ್ರಮವು ಮಾಗಡಿ ರಸ್ತೆಯ ಖಾಸಗಿ ಸ್ಥಳದಲ್ಲಿ ನಡೆದಿದೆ. ನಟಿಗೆ ಶುಭ ಹಾರೈಸಲು ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ಸೇರಿದಂತೆ ಹಲವರು ಆಗಮಿಸಿದ್ದರು.