ವಿಜಯ್ ದೇವರಕೊಂಡ ಜೊತೆಗಿನ ನಿಶ್ಚಿತಾರ್ಥ ಖಚಿತ ಪಡಿಸಿದ ರಶ್ಮಿಕಾ ಮಂದಣ್ಣ: ವಿಡಿಯೋದಲ್ಲಿ ಉಂಗುರ ತೋರಿದ ನಟಿ

0
Spread the love

ಕಳೆದ ಕೆಲ ದಿನಗಳ ಹಿಂದೆ ಕನ್ನಡದ ಬ್ಯೂಟಿ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್‌ ದೇವರಕೊಂಡ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ. ವಿಜಯ್‌ ದೇವರಕೊಂಡ ಮನೆಯಲ್ಲೇ ಎಂಗೇಜ್‌ ಮೆಂಟ್‌ ನಡೆದಿದ್ದು ಈ ಬಗ್ಗೆ ಜೋಡಿಗಳು ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದೀಗ ನಟಿ ವಿಡಿಯೋ ಶೇರ್‌ ಮಾಡಿದ್ದು ಅದರಲ್ಲಿ ಎಂಗೇಜ್‌ ಮೆಂಟ್‌ ರಿಂಗ್‌ ಕಾಣಿಸಿಕೊಂಡಿದೆ.

Advertisement

ಫೆಬ್ರವರಿ 2026 ರಲ್ಲಿ ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ  ಮದುವೆಯಾಗಲು ಪ್ಲ್ಯಾನ್ ಮಾಡಿದ್ದಾರೆ  ಎಂದು ಬಹಿರಂಗಪಡಿಸಿತು. ಈಗ, ಅವರ ನಿಶ್ಚಿತಾರ್ಥದ ಕೆಲವು ದಿನಗಳ ನಂತರ, ರಶ್ಮಿಕಾ ಮಂದಣ್ಣ ವಜ್ರದ ಉಂಗುರವನ್ನು ಪ್ರದರ್ಶಿಸುತ್ತಿದ್ದು ನಿಶ್ಚಿತಾರ್ಥದ ಸುದ್ದಿಯನ್ನು ದೃಢಪಡಿಸುತ್ತಿದೆ.

ಇದುವರೆಗೂ ರಶ್ಮಿಕಾ ಅಥವಾ ವಿಜಯ್ ದೇವರಕೊಂಡ ಅವರ ಎಂಗೇಜ್‌ ಮೆಂಟ್‌ ನ ಯಾವುದೇ ಫೋಟೋಗಳನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ. ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ  ಎಡಗೈಯಲ್ಲಿ ಉಂಗುರವನ್ನು ಧರಿಸಿರುವುದು ಕಂಡುಬಂದಿದೆ.


Spread the love

LEAVE A REPLY

Please enter your comment!
Please enter your name here