ಇಂದಿನಿಂದ ಹಾಸನಾಂಬೆ ದರ್ಶನ ಭಾಗ್ಯ: ದೇವಿ ನೋಡಲು ಕಾದು ಕುಳಿತಿರುವ ಭಕ್ತಗಣ!

0
Spread the love

ಹಾಸನ:- ಇಂದಿನಿಂದ ಶಕ್ತಿ ದೇವತೆ ಹಾಸನಾಂಬೆ ಭಕ್ತಗರಿಗೆ ದರ್ಶನ ಕೊಡಲಿದ್ದು, ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ತೆರೆಯಲಿದೆ.

Advertisement

2024ನೇ ಸಾಲಿನ ಹಾಸನಾಂಬೆ ಜಾತ್ರೆ ಹಾಗೂ ದರ್ಶನ ಮಹೋತ್ಸವ ಇಂದಿನಿಂದ 11 ದಿನಗಳ ಕಾಲ ನಡೆಯಲಿದ್ದು, ಹಿಂದಿನ ವರ್ಷಕ್ಕಿಂತ ಎರಡು ದಿನ ಕಡಿಮೆ ಇರುವುದರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ವರ್ಷಕ್ಕೊಮ್ಮೆ ದರ್ಶನ ನೀಡಲು ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಮಳೆ-ಬಿಸಿಲಿನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ.

ಹಾಸನಾಂಬೆ ದೇವಾಲಯದ ಒಳ-ಹೊರಗೆ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಹಾಸನಾಂಬೆಯ ಬಾಗಿಲ ಮುಂಭಾಗ ಕಲಶದ ರೀತಿಯ ಹೂವಿನ ಕುಂಡ ಎಲ್ಲರ ಗಮನ ಸೆಳೆಯುತ್ತಿದೆ.

ಇದೇ ಮೊದಲ ಬಾರಿಗೆ ದೇವಾಲಯದ ಬಳಿಗೆ ಬರುವ ಗಣ್ಯಾತಿಗಣ್ಯರಿಗೆ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಎರಡು ಮಾರ್ಗ ಮಾಡಲಾಗಿದೆ. ಹಾಗೆಯೇ ಲಡ್ಡು-ಪ್ರಸಾದ ವಿತರಣೆಗೆ 24 ಕೌಂಟರ್ ತೆರೆಯಲಾಗಿದೆ.

ಹಾಸನ ನಗರವನ್ನು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಇಂದಿನಿಂದ ನವೆಂಬರ್ 3ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ.


Spread the love

LEAVE A REPLY

Please enter your comment!
Please enter your name here