ಹಾಸನ:- ರಾಜಧಾನಿ ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಪ್ರೇಯಸಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
21 ವರ್ಷದ ಪ್ರಿಯಾಂಕಾ ಮೃತ ಯುವತಿ. 19 ವರ್ಷದ ಸುಮಂತ್ ಎನ್ನುವಾತನೇ ಪ್ರಿಯಾಂಕಾಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟ ಪ್ರಿಯಕರ. ತನಗಿಂತ ಚಿಕ್ಕವನ ಪ್ರೇಮದ ಬಲೆಯಲ್ಲಿ ಬಿದ್ದು ಪ್ರಿಯಾಂಕಾ ದುರಂತ ಅಂತ್ಯಕಂಡಿದ್ದಾಳೆ. ಆದ್ರೆ, ಘಟನೆ ನಡೆದು ವಾರ ಕಳೆದರೂ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಪ್ರಿಯಕರನ ಬಂಧನವಾಗಿಲ್ಲ. ಯುವತಿ ಪ್ರಿಯಾಂಕ ಹೆತ್ತವರು ಕಣ್ಣೀರುಡುತ್ತಿದ್ದಾರೆ.
ಪ್ರಿಯಾಂಕಾ ಅವರು ತಾಯಿ ಶೋಭಾ ತಂದೆ ಜಯರಾಂ ನಾಯಕ್ ಜೊತೆಗೆ ಬೆಂಗಳೂರಿನ ನೆಲಗದ್ದರಹಳ್ಳಿಯಲ್ಲಿ ನೆಲೆಸಿದ್ದಳು. ಮೂರು ತಿಂಗಳ ಹಿಂದಷ್ಟೇ ಡಿಪ್ಲೋಮಾ ಮುಗಿಸಿ ತಾಯಿ ಕೆಲಸಮಾಡೋ ಖಾಸಗಿ ಕಂಪನಿಯಲ್ಲೇ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆದ್ರೆ, ಪ್ರಿಯಾಂಕಾ, ಹಾಸನ ಜಿಲ್ಲೆ ಆಲೂರು ತಾಲ್ಲೂಕು ಮೂಲದ ಪಾಪಿ ಸುಮಂತ್ ನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಮಗಳ ಲವ್ ವಿಚಾರ ಗೊತ್ತಾಗಿ ನಿನಗೆ 21 ವರ್ಷ. ಆ ಹುಡುಗನಿಗೆ ಇನ್ನೂ 19 ವರ್ಷ. ಹೀಗಾಗಿ ಎರಡು ವರ್ಷ ಬಳಿಕ ಆನಂತರ ಮದುವೆ ಮಾಡುವುದಾಗಿ ತಾಯಿ ಹೇಳಿದ್ದಳು. ಆದರೂ ಪ್ರಿಯಾಂಕಳನ್ನ ಬೆನ್ನು ಬಿದ್ದಿದ್ದ ಸುಮಂತ್ ಕೊಡಬಾರದ ಕಾಟ ಕೊಟ್ಟಿದ್ದಾನೆ.
ಪ್ರಿಯಾಂಕಾಳ ಫೋನ್ ಬ್ಯುಸಿ ಬಂದಾಗೆಲ್ಲ ಸುಮಂತ್ಗೆ ಅನುಮಾನ. ಸಾಲದಕ್ಕೆ ಸಿಕ್ಕ ಸಿಕ್ಕವರ ಜೊತೆ ಸಂಬಂಧಕಟ್ಟಿ ಬಾಯಿಗೆ ಬಂದಂಗೆ ಬೈಯುತ್ತಿದ್ದ. ಅಲ್ಲದೇ ಅಕ್ಟೋಬರ್ 30ರ ಗುರುವಾರ ಬೆಳಿಗ್ಗೆ ಕೂಡ ಕರೆ ಮಾಡಿ ಗಲಾಟೆ ಮಾಡಿದ್ದು, ಆತ್ಮಹತ್ಯೆ ಮಾಡಿಕೋ ಎಂದು ಪ್ರಚೋದನೆ ನೀಡಿದ್ದಾನೆ. ಇದರಿಂದ ಪೂರ್ತಿ ಮನನೊಂದಿದ ಪ್ರಿಯಾಂಕಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹೀಗಾಗಿ ಆರೋಪಿ ವಿರುದ್ದ ಸೂಕ್ತ ಕ್ರಮಕ್ಕೆ ಯುವತಿ ಪೋಷಕರು ಆಗ್ರಹ ಮಾಡಿದ್ದಾರೆ.


