HomeGadag Newsಅವಕಾಶಗಳೊಂದಿಗೆ ಉತ್ತಮ ಭವಿಷ್ಯ ಹೊಂದಿ: ಸಿ.ಆರ್. ಮುಂಡರಗಿ

ಅವಕಾಶಗಳೊಂದಿಗೆ ಉತ್ತಮ ಭವಿಷ್ಯ ಹೊಂದಿ: ಸಿ.ಆರ್. ಮುಂಡರಗಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಗದಗ ಇವರ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜೀವಿಸುತ್ತಿದ್ದು, ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪಠ್ಯ-ಪುಸ್ತಕ ಓದುವುದು, ಪರೀಕ್ಷೆ ಎದುರಿಸುವುದು ಎಂದು ಅರ್ಥ ಅಲ್ಲ. ನೀವು ಉತ್ತಮ ಸಮಾಜ, ವ್ಯಕ್ತಿತ್ವ ನರ‍್ಮಾಣ ಮಾಡುವುದೇ ಶಿಕ್ಷಣದ ಗುರಿ ಆಗಬೇಕು. ಮುಂದೊಂದು ದಿನ ಉನ್ನತವಾದ ಸ್ಥಾನ ಅಲಂಕರಿಸಲು ಈಗಿನಿಂದಲೇ ತಾವು ಅಚಲ ನಿರ್ಧಾರದೊಂದಿಗೆ ಓದಿನ ಕಡೆ, ಅಭ್ಯಾಸದ ಕಡೆ ಗಮನ ಕೊಡಬೇಕು ಎಂದರು.

ನೋಡಲ್ ಅಧಿಕಾರಿ ಶಿವಕುಮಾರ ಕುರಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿ ರ‍್ಷ ಜನವರಿ ೨೫ರಂದು ರಾಷ್ಟಿçÃಯ ಮತದಾರರ ದಿನಾಚರಣೆಯನ್ನು ಆಚರಿಸುತ್ತೇವೆ. ವಿದ್ಯಾರ್ಥಿಗಳು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟçವನ್ನು ಕಟ್ಟುವ ನಿಟ್ಟಿನಲ್ಲಿ ಈಗಿನಿಂದಲೇ ಚುನಾವಣೆ, ಮತದಾನದ ಮಹತ್ವವನ್ನು ತಿಳಿಯಬೇಕೆಂಬುದು ಇದರ ಆಶಯ ಎಂದರು.

ಪ್ರಬಂಧ (ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ) ಸ್ಪರ್ಧೆಗಳು, ಭಿತ್ತಿ ಚಿತ್ರ ಹಾಗೂ ರಸಪ್ರಶ್ನೆ ಸ್ರ‍್ಧೆಗಳು ಜರುಗಿದವು. ರಸಪ್ರಶ್ನೆಯು ಥಟ್ ಅಂತ ಹೇಳಿ ಮಾದರಿಯಲ್ಲಿ ನಡೆದಿರುವುದು ಎಲ್ಲಾ ವಿದ್ಯರ‍್ಥಿಗಳ ಮತ್ತು ಪಾಲಕರ ಗಮನ ಸೆಳೆಯಿತು. ನಿರ್ಣಾಯಕರಾಗಿ ನುರಿತ ಶಿಕ್ಷಕರು ಆಗಮಿಸಿ ಕರ‍್ಯಕ್ರಮವನ್ನು ಯಶಸ್ವಿಗೊಳಿಸಿದರು. ಎಂ.ಎ. ಯರಗುಡಿ ನಿರೂಪಿಸಿದರು. ಎಂ.ಬಿ. ಕರಡ್ಡಿ ವಂದಿಸಿದರು.

ಸ್ಪರ್ಧೆಗಳ ಫಲಿತಾಂಶದ ವಿವರ

ಪ್ರಬಂಧ ಸ್ಪರ್ಧೆಗಳ (ಕನ್ನಡ) ಪೂರ್ಣಿಮಾ ಅನವಾಲ ಪ್ರಥಮ, ಸೌಮ್ಯ ಕಿತ್ತೂರು ದ್ವಿತೀಯ, ಮಂಜುಳಾ ಹಿರೇಮಠ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ (ಇಂಗ್ಲಿಷ್) ಶ್ರೇಯಾ ಚಿಕ್ಕರಡ್ಡಿ ಪ್ರಥಮ, ನಿವೇದಿತಾ ಹಂದ್ರಾಳ ದ್ವಿತೀಯ, ಸುಮಲತಾ ಕಬ್ಬೇರಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ರೇವಂತರೆಡ್ಡಿ ಮುಂಡರಗಿ ಹಾಗು ಶಾಂತಮ್ಮ ಸಜ್ಜನರ ಪ್ರಥಮ, ಶಿದ್ಧಮ್ಮ ಹಳೆಮನಿ, ಸೌಂದರ್ಯ  ಮನವಾಚಾರಿ ದ್ವಿತೀಯ, ನಿಖಿತಾ ಮಾಲಿಪಾಟೀಲ, ಕವಿತಾ ತಳವಾರ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಈಶ್ವರ ಹೂಗಾರ ಪ್ರಥಮ, ಖದಿಜಾ ಸೂರಣಗಿ ದ್ವಿತೀಯ, ಕೌಸರಬಾನು ನದಾಫ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!