ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ ಎಂದು ಗೃಹಲಕ್ಷ್ಮಿಯರು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದರು. ಕಳೆದ ಮೂರು ತಿಂಗಳಿನಿಂದ ಹಣ ಹಾಕಿಲ್ಲ ಎನ್ನುವ ಆರೋಪಗ ಕೇಳಿಬಂದಿದ್ದು,
ಈ ಕುರಿತು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಏಪ್ರಿಲ್ ತಿಂಗಳದ್ದು ಹಣ ಬಿಲ್ಲಿಂಗ್ ಆಗುತ್ತಿದೆ. ಮಾರ್ಚ್ ತಿಂಗಳದ್ದು ಇಯರ್ ಎಂಡ್ ಆಗಿದ್ದರಿಂದ ತಡವಾಗಿದೆ. ಆದಷ್ಟು ಬೇಗ ಹಣ ಹಾಕುತ್ತೇವೆ ಎಂದು ಹೇಳಿದರು.
ಮಾರ್ಚ್‌ನಲ್ಲಿ ವಿತ್ತೀಯ ವರ್ಷ ಮುಕ್ತಾಯವಾಗುವ ಕಾರಣದಿಂದಾಗಿ ಹಣ ಬಿಡುಗಡೆ ತಡವಾಗಿದೆ. ಅದರ ಹೊರತಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2025ರಲ್ಲಿ ಕೇವಲ ಜನವರಿ ಮತ್ತು
ಫೆಬ್ರವರಿ ತಿಂಗಳಲ್ಲಿ ಮಾತ್ರ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಹಾಕಿ ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದೆ ಎಂಬ ವಿರೋಧಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾರ್ಚ್ ತಿಂಗಳಿನಿಂದ ಬಾಕಿ ಉಳಿದಿರುವ ಮೂರು ತಿಂಗಳ ಹಣವೂ ಸಹ ಒಟ್ಟಿಗೆ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.