ಹಾವೇರಿ: ರಾಜ್ಯ ಸರ್ಕಾರದ ಹಾಲಿನ ದರ ಏರಿಕೆಗೆ ಹಾವೇರಿ ಜಿಲ್ಲಾ ಹಾಲು ಒಕ್ಕೂಟ ಸೆಡ್ಡು ಹೊಡೆದಿದೆ. ಈ ಮೂಲಕ ಹಾಲಿನ ದರ 3.50 ರೂ. ಇಳಿಕೆ ಆಗಿದೆ.
ರಾಜ್ಯದಲ್ಲಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು. ಏಪ್ರೀಲ್ 1 ರಿಂದ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಲು ಕೆಎಂಎಫ್ ನಿರ್ಧಾರ ಮಾಡಿದೆ. ಆದರೆ ಹಾವೇರಿ ಹಾಲು ಒಕ್ಕೂಟ ಮಾತ್ರ ಲೀಟರ್ ಹಾಲಿಗೆ 3.50 ರೂ.ಪಾಯಿ ಕಡಿಮೆ ಮಾಡಿ ಆದೇಶ ಮಾಡಿದೆ, ಇದು ರೈತರ ಆಕ್ರೋಶ ಕಾರಣವಾಗಿದೆ.
ಎಮ್ಮೆ ಹಾಲಿಗೆ ಲೀಟರ್‌ಗೆ 43 ರೂ. ನೀಡಲಾಗುತ್ತಿತ್ತು. ಹಸುವಿನ ಹಾಲಿಗೆ 30.50 ರೂಪಾಯಿ ನೀಡಲಾಗ್ತಿತ್ತು. ಆದರೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಕಾರಣ ನೀಡಿ 3.50 ರೂಪಾಯಿ ಕಟ್ ಮಾಡಿದೆ. ಮಾರ್ಚ್ 27ರಂದೇ ಹಾವೆಮುಲ್ ಆದೇಶ ಮಾಡಿದೆ. ಇದರಿಂದ 43 ರೂ. ಇದ್ದ ಎಮ್ಮೆ ಹಾಲಿನ ದರ 39.50 ರೂ., 30.50 ರೂ. ಇದ್ದ ಹಸುವಿನ ಹಾಲಿನ ದರ 27 ರೂ.ಗಳಿಗೆ ಇಳಿಕೆಯಾಗಿದೆ.



