ಹಾವೇರಿ: ಹಾವೇರಿ ಜಿಲ್ಲೆಯ ಎರಡು ಪ್ರಬಲ ಸಮುದಾಯದ ಮಠಗಳ ಮಧ್ಯೆಯೇ ದೇಣಿಗೆ ದಂಗಲ್ ಶುರುವಾಗಿದೆಯೇ..? ಹೌದು ಕಬ್ಬಿಣಕಂತಿ ಮಠಕ್ಕೆ ದೇಣಿಗೆ ನೀಡದಂತೆ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಪಂಚಮಸಾಲಿ ಶ್ರೀಗಳ ವಿರುದ್ಧ ಶ್ರೀ ನಿರಂಜನಾದಪುರಿ ಶ್ರೀಗಳಿಂದ ಮೊನ್ನೆ ಪ್ರಕಟಣೆ ಹೊರಡಿಸಲಾಗಿತ್ತು.
ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ 60 ವಸಂತ ಪೂರೈಸಿದ್ದಾರೆ. ಜನ್ಮದಿನ ಷಷ್ಠ್ಯಬ್ದಿ ಎಂಬ ಕಾರ್ಯಕ್ರಮ ಮಠದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆಂದು ಕನಿಷ್ಠ 25,000 ರೂಪಾಯಿಗಳನ್ನು ದೇಣಿಗೆ ಒತ್ತಾಯಿಸಿದ್ದಾರೆ. ಇದು “ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬಂತಾಗಿದೆ.
ಕುರುಬ ಸಮಾಜದ ಬಂಧುಗಳ ತನು , ಮನ, ಧನ ಬಳಸಿಕೊಳ್ತಿದ್ದಾರೆ. ಲಿಂಗಪೂಜೆ , ಪಾದಪೂಜೆ ಎಂಬುದು ಕಪೋಲಕಲ್ಪಿತ ಕಥೆಗಳು. ಆರ್ಥಿಕವಾಗಿ ಶೋಷಣೆ ಮಾಡುವುದು ಖಂಡನೀಯ ಕುರುಬ ಸಮಾಜದ ಮುಗ್ದ ಬಂಧುಗಳೇ ಜಾಗೃತರಾಗಿ ಎಂದು ಪ್ರಕಟಣೆ ಹೊರಡಿಸಲಾಗಿತ್ತು.ಕಾಗಿನೇಲೆ ಶ್ರೀಗಳ ಈ ಪ್ರಕಟಣೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಈ ಪ್ರಕಟಣೆಯ ಬೆನ್ನಲ್ಲೇ ಕನಕಗುರು ಪೀಠದ ನಿರಂಜನಾದಪುರಿ ಸ್ವಾಮೀಜಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ವೀರಶೈವ ಧರ್ಮದ ಆಚರಣೆಗಳ ಬಗ್ಗೆ ಹೇಳಿಕೆ ನೀಡಲು ಕನಕಗುರು ಪೀಠದ ಸ್ವಾಮೀಜಿಗೆ ಯಾವ ಹಕ್ಕಿಲ್ಲ, ಅದನ್ನ ಅವರು ಕೇಳಲು ಬಾರದು, ಅದು ವೀರಶೈವರಿಗೆ ಸಂಬಂಧಪಟ್ಟಿದ್ದು ಎಂದು ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರುಬ ಸಮುದಾಯದವರಿಗೆ ಲಿಂಗದೀಕ್ಷೆ ಕೊಟ್ಟುವಿಲ್ಲ.,ನಾವು ಕೋಡೊದು ಇಲ್ಲ, ಲಿಂಗದೀಕ್ಷೆ ಎಲ್ಲಿ ಮಾಡ್ತಿವಿ ಶೋಷಣೆ ಅಂದ್ರೆ ಏನು ಅರ್ಥ…? ಕುರುಬ ಸಮುದಾಯದಿಂದ ವೀರಶೈವ ಧರ್ಮದವರು ಫಲ್ಲಕ್ಕಿ ಉತ್ಸವ ಮಾಡಿಸಿಕೊಂಡು ಶೋಷಣೆ ಮಾಡಿಲ್ಲ. ಆದ್ದರಿಂದ ಅವರ ಪ್ರಕಟಣೆ ಸತ್ಯ ಸಂಗತಿ ಅಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



