ಹಾವೇರಿ: ವಿದ್ಯುತ್‌ ತಗುಲಿ ತಂದೆ-ಮಗ ಸಾವು

0
Spread the love

ಹಾವೇರಿ: ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದೆ. ಹೌದು ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ಪಂಪ್ ಸೆಟ್ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ತಂದೆ – ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಕರಬಸಪ್ಪ ಕಡೇನಾಯಕನಹಳ್ಳಿ (50) ಹಾಗೂ ಅವರ ಪುತ್ರ ದರ್ಶನ (26) ಮೃತ ದುರ್ಧೈವಿಗಳಾಗಿದ್ದು, ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ್ ಆನ್ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.

ವಿದ್ಯುತ್ ಸ್ಪರ್ಶಕ್ಕೆ ಪಂಪ್ ಸೆಟ್ ಮೇಲೆಯೇ ಬಿದ್ದು ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

LEAVE A REPLY

Please enter your comment!
Please enter your name here