Haveri: ಕೊಟ್ಟಿಗೆಗೆ ಬೆಂಕಿ; 6 ಹಸು ಹಾಗೂ 2 ಕರು ಸಜೀವದಹನ!

0
Spread the love

ಹಾವೇರಿ:- ಆಕಸ್ಮಿಕವಾಗಿ ದನದ ಕೊಟ್ಟಿಗೆ ಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 6 ಹಸು ಹಾಗೂ 2 ಕರು ಸಜೀವ ದಹನವಾಗಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.

Advertisement

ನಾಗಪ್ಪ ಅಸುಂಡಿ, ಹನುಮಂತಪ್ಪ ಅಸುಂಡಿ ಎಂಬುವ ರೈತರಿಗೆ ಸೇರಿದ ದನದಕೊಟ್ಟಿಗೆಯಲ್ಲಿ ಈ ಅವಘಡ ಸಂಭವಿಸಿದೆ. ಊರಿ ಹೊರಗೆ ಇರುವ ಜಾಗೆದಲ್ಲಿದ್ದ ದನದಕೊಟ್ಟಿಗೆಯಲ್ಲಿ ಈ ಘಟನೆ ಜರುಗಿದ್ದು, 6 ಹಸು, 2 ಕರುಗಳು ಸ್ಥಳಯೇ ಸಜೀವ ದಹನವಾಗಿದೆ.

ಆಕಸ್ಮಿಕವಾಗಿ ದನಕೊಟ್ಟಿಗೆ ಬೆಂಕಿ ಹತ್ತಿರೋ ಶಂಕೆ ವ್ಯಕ್ತವಾಗಿದೆ. ಸುಮಾರು 6 ಲಕ್ಷ ಅಧಿಕ ಮೌಲ್ಯದ ದನದಕೊಟ್ಟಿಗೆ ಮತ್ತು ‌ಹಸುಗಳು ಸುಟ್ಟು ಕರಕಲಾಗಿದ್ದು, ರೈತ ಕಂಗಾಲಾಗಿದ್ದಾನೆ. ಸ್ಥಳಕ್ಕೆ ರಟ್ಟಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here