ಭಾವೈಕ್ಯತೆಯ ಮನೋಭಾವನೆ ಅಗತ್ಯ : ಶಾಂತಲಿಂಗ ಮಹಾಸ್ವಾಮಿಗಳು

0
Hazrat Mehbooba Subani Urus program
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ಭಾವೈಕ್ಯತೆ ಎಂಬುದು ಬದುಕಿನಲ್ಲಿ ಮಹತ್ತರವಾದುದು. ಭಾವೈಕ್ಯತೆಯನ್ನು ಬಿತ್ತಲೆಂದೇ ಈ ನೆಲದಲ್ಲಿ ಶರಣರು, ಸಂತರು ಅನೇಕ ಸಂದೇಶಗಳನ್ನು ಸಾರಿ ಹೋಗಿದ್ದಾರೆ. ಅಂತಹ ಸಂತರ ಸ್ಮರಣೆಯ ಘಳಿಗೆಗಳೇ ಇಂತಹ ಭಾವಕ್ಯತೆ ಕಾರ್ಯಕ್ರಮಗಳಾಗಿವೆ. ಮಹಮ್ಮದ್ ಪೈಗಂಬರ್ ಅವರ ತತ್ವಕ್ಕೂ ಬಸವಣ್ಣನವರ ತತ್ವಕ್ಕೂ ಸಾಮ್ಯತೆ ಇದೆ. ಜಾತಿ, ಮತ, ಪಂಥಗಳನ್ನು ಮೀರಿದ ಬಾಂಧವ್ಯಗಳನ್ನು ಅಳವಡಿಸಿಕೊಳ್ಳಬೇಕು. ಭಾವೈಕ್ಯತೆಯ ಮನೋಭಾವನೆ ಮತ್ತು ಹೊಂದಾಣಿಕೆ ಅಗತ್ಯ ಎಂದು ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಮಹಾಸ್ವಾಮಿಗಳು ನುಡಿದರು.

Advertisement

ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದ ಹಜರತ್ ಮೆಹಬೂಬ ಸುಬಾನಿ ಉರುಸ್ ಕಾರ್ಯಕ್ರಮ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಸಮ್ಮುಖ ನೇತೃತ್ವವನ್ನು ಅಪ್ಪಯ್ಯ ಶಾಸ್ತಿçಗಳು ಹಿರೇಮಠ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ರಾಜೇಸಾಬ ಚಳ್ಳಮರದ, ಉಪಾಧ್ಯಕ್ಷ ರಾಘವೇಂದ್ರ ಹಣಗಿ, ದಾದಫೀರ್ ಶಿರೂರ, ಮುಸ್ತಫಾ ನೀಲಗುಂದ, ಅಶೋಕ್ ತಡಹಾಳ, ಗ್ರಾ.ಪಂ ಅಧ್ಯಕ್ಷೆ ಹನಮವ್ವ ಹಿರೇಮನಿ, ಉಪಾಧ್ಯಕ್ಷ ಹನಮಂತಗೌಡ ತಿರಕನಗೌಡ್ರ, ಮೆಹಬೂಬ್ ಸುಬಾನಿ ಸಮಿತಿಯ ಗೌರವಾಧ್ಯಕ್ಷ ಇಬ್ರಾಹಿಂಸಾಬ ಚಳ್ಳಮರದ, ಹುಸೇನಸಾಬ ನೀಲಗುಂದ, ಮಹಮ್ಮದ್‌ಸಾಬ ಚಳ್ಳಮರದ, ಪ್ರಕಾಶಗೌಡ ತಿರಕನಗೌಡ್ರ, ಲಾಲಸಾಬ ಅರಗಂಜಿ, ರಂಜಾನ್ ಸಾಬ ನದಾಫ್, ನಜೀರ್ ಚಳ್ಳಮರದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸುನೀಲ ಕಳಸದ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here