ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮದಲ್ಲಿ ಅ.27ರಂದು ಹಜರತ್ ಮೆಹಬೂಬ ಸುಬ್ಹಾನಿ ಉರುಸು ನಡೆಯಲಿದೆ.
Advertisement
ಕಾರ್ಯಕ್ರಮದ ಅಂಗವಾಗಿ ಮುಂಜಾನೆ 11.30ಕ್ಕೆ ಕರ್ನಾಟಕ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಗಂಧವನ್ನು ಡೊಳ್ಳು ವಾದ್ಯ ವೈಭವದೊಂದಿಗೆ ಮೆರವಣಿಗೆ ಮೂಲಕ ಬಂಡಿವಡ್ಡರ ಓಣಿಯಲ್ಲಿರುವ ದರ್ಗಾಕ್ಕೆ ತರಲಾಗುತ್ತದೆ.
ನಂತರ ಪೂಜೆ ನೆರವೇರಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ ಎಂದು ಹಜರತ್ ಮೆಹಬೂಬ ಸುಬ್ಹಾನಿ ದರ್ಗಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.