ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಗದಗ ಜಿಲ್ಲಾ ಘಟಕದಿಂದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತ್ಯುತ್ಸವವನ್ನು ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
Advertisement
ಮಹಾಸಭಾದ ಗದಗ ಜಿಲ್ಲಾ ಉಸ್ತುವಾರಿ ಎಂ.ಡಿ. ಜಾಫರ್ ಡಾಲಾಯತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್. ನಾಗರಕಟ್ಟಿ, ನಗರಸಭೆಯ ಸದಸ್ಯ ಜೂನ್‌ಸಾಬ್ ನಮಾಜಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಉಮರ ಫಾರೂಕ್ ಹುಬ್ಬಳ್ಳಿ, ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಯೂಸುಫ್ ನಮಾಜಿ, ಮೆಹಬೂಬ್ ಮುಲ್ಲಾ, ರಹಿಂ ಸಾಬ್ ದೊಡ್ಡಮನಿ, ಬಾಬಾಜಾನ್ ಬಳಗಾನೂರು, ಚಾಂದಸಾಬ್ ಕೊಟ್ಟೂರು, ಮೊಹಮ್ಮದ್ ಅಸ್ಲಂ ದಂಡಿನ, ಇಮ್ತಿಯಾಜ್ ಪಠಾಣ ಮುಂತಾದವರು ಉಪಸ್ಥಿತರಿದ್ದರು.


