ಹಾಸನ: ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಆದರೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಪರ ಹೆಚ್.ಡಿ.ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ.
Advertisement
ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಅಧಿಕಾರ ಇದ್ದಾಗ ಕೆಲಸ ಮಾಡಬೇಕೆಂದು ಹೇಳ್ತಾರೆ, ಇದು ತಪ್ಪಾ? ಯತೀಂದ್ರ ಶಾಸಕರಾಗಿದ್ದರು, ಕೆಲಸ ಆಗಬೇಕೆಂದು ಹೇಳಿರಬಹುದು.
ಯತೀಂದ್ರ ಮುಖ್ಯಮಂತ್ರಿ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದೆಕ್ಕಲ್ಲಾ ನಾನು ಸಣ್ಣದಾಗಿ ಮಾತನಾಡಲು ಹೋಗಲ್ಲ.
ಹೆಚ್ಡಿಡಿ PWD ಸಚಿವರಾಗಿದ್ದಾಗ ನಾನು ಅವರ ಕ್ಷೇತ್ರ ನೋಡಿಕೊಳ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತಾಡಿರುತ್ತಾರೆ ಎಂದು ಹಾಸನದಲ್ಲಿ ಯತೀಂದ್ರ ಪರ JDS ಶಾಸಕ ಹೆಚ್.ಡಿ.ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ.