ರಾಮನಗರ: ಯೋಗೇಶ್ವರ್ʼರನ್ನು ಕಾಂಗ್ರೆಸ್ʼಗೆ ಕಳುಹಿಸಲು ಪ್ಲ್ಯಾನ್ ಮಾಡಿದ್ದೆ HDK ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ನಗರಲದಲ್ಲಿ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿಯು ಎಚ್.ಡಿ.ಕುಮಾರಸ್ವಾಮಿ ಅವರು ಗೊಂದಲ ಸೃಷ್ಟಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ. ನಾವು ಇಂದಿಗೂ ಅವರಿಗೆ ಬೈದಿಲ್ಲ. ನಾವು ಅವರನ್ನು ವಿರೋಧಿಗಳು ಎಂದು ಎಲ್ಲಿಯು ಹೇಳಿಲ್ಲ.
ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಕಳುಹಿಸಲು ಪ್ಲ್ಯಾನ್ ಮಾಡಿದ್ದೆ ಎಚ್‌ಡಿಕೆ ಎಂದು ಆರೋಪಿಸಿದ್ದಾರೆ. ಟಿಕೆಟ್ ವಿಚಾರದಲ್ಲಿಯು ಎಚ್.ಡಿ.ಕುಮಾರಸ್ವಾಮಿ ಅವರು ಗೊಂದಲ ಸೃಷ್ಟಿಸಿದ್ದಾರೆ. ಕನಿಷ್ಟ 25 ಸಾವಿರ ಲೀಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ದೇವೇಗೌಡರನ್ನು ನಾವು ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರು ದೊಡ್ಡವರು. ಅವರು ವಯಸ್ಸಿನಲ್ಲಿಯೂ ದೊಡ್ಡವರು. ಅವರು ಯಾರಿಗೆ ಬೇಕಿದ್ದರೂ ಸೊಕ್ಕು ಮುರಿಯುತ್ತೆನೆ ಎಂದು ಹೇಳಬಹುದು. ಅವರ ಮಾತಿಗೆ ನಾವು ಕೌಂಟರ್ ನೀಡಲು ಆಗುವುದಿಲ್ಲ. ಅವರ ಹೆಚ್ಚಿನ ಮಾತುಗಳು ಅವರಿಗೆ ಮುಳುವಾಗಲಿದೆ ಎಂದರು.