ಕೋಲಾರ: HDK ಮನಸ್ಸು ಮಾಡಿ ಯೋಗಿಶ್ವರ್ʼಗೆ ಸೀಟು ಬಿಟ್ಟು ಕೊಡಬೇಕು ಎಂದು ಮಾಜಿ ಸಂಸದ ಮುನಿಸ್ವಾಮಿ ಹೇಳಿದರು. ಕೋಲಾರದಲ್ಲಿ ಮಾತನಾಡಿದ ಅವರು, ನಾನು ಸಂಸದನಾಗಿದ್ದಾಗ ಜೆಡಿಎಸ್‌ಗೆ ಸೀಟು ಬಿಟ್ಟು ಕೊಟ್ಟಿದ್ದೇವೆ. ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಈಗ ಕುಮಾರಸ್ವಾಮಿ ಸಹ ಮನಸು ಮಾಡಿ ಯೋಗಿಶ್ವರ್‌ಗೆ ಸೀಟು ಬಿಟ್ಟು ಕೊಡಬೇಕು ಎಂದರು.
Advertisement
ಲೋಕಸಭಾ ಚುನಾವಣೆಯಲ್ಲಿ ಹೆಚ್‌ಡಿಕೆ ಪರವಾಗಿ ಯೋಗೇಶ್ವರ್ ಕೆಲಸ ಮಾಡಿದ್ದಾರೆ. ಬಿಜೆಪಿಯ ಬಹುತೇಕ ನಾಯಕರ ಅಭಿಪ್ರಾಯ ಇದೇ ಆಗಿದೆ. ಹಠ ಮಾಡದೇ ಹೆಚ್‌ಡಿಕೆ ಸೀಟು ಬಿಟ್ಟು ಕೊಡಬೇಕು. ಇಬ್ಬರು ಸೇರಿ ಕೆಲಸ ಮಾಡಿದರೆ ಗೆಲುವು ಖಚಿತ. ಯೋಗೇಶ್ವರ್ ಬಂಡಾಯ ಅಭ್ಯರ್ಥಿ ಆದರೆ ಅನುಕೂಲ ಆಗೋದಿಲ್ಲ ಎಂದು ತಿಳಿಸಿದರು.