‘ಗಿಣಿ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ನಯಾನ ಬಳಿಕ ಕಿರುತೆರೆ ಲೋಕವನ್ನು ತೊರೆದೇ ಬಿಟ್ಟರು. ಸದ್ಯ ಸುಹಾಸ್ ಎಂಬುವವರ ಜೊತೆ ಮದುವೆಯಗಿ ಹಾಯಾಗಿ ಸಂಸಾರ ನಡೆಸುತ್ತಿರುವ ನಟಿ ‘ಗಿಣಿ ರಾಮ’ ಧಾರವಾಹಿ ಬಿಡಲು ಕಾರಣ ಏನು ಎಂದು ಹೇಳಿಕೊಂಡಿದ್ದಾರೆ.
ಖಾಸಗಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಯನಾ, ‘ನನಗೆ ಇಷ್ಟ ಆಗಿಲ್ಲ ಎಂದರೆ ನೇರವಾಗಿ ಹೇಳುತ್ತೇನೆ. ನೀವು ಏನಾದರೂ ಕೆಟ್ಟದ್ದು ಹೇಳಿದರೆ ನನಗೆ ಬೇಸರ ಆಗುತ್ತದೆ. ನನ್ನ ಪಾಡಿಗೆ ನಾನು ಇರುತ್ತಾ ಇದ್ದೆ. ಒಂದೂವರೆ ವರ್ಷದ ಬಳಿಕ ಸೆಟ್ನಲ್ಲಿ ಕಿರಿಕ್ ಆಯಿತು. ಒಂದೂಕಾಲು ವರ್ಷ ತಡೆದುಕೊಂಡೆ’ ಎಂದು ಅವರು ಹೇಳಿದ್ದಾರೆ.
ಇಂಡಸ್ಟ್ರಿಯಲ್ಲಿ ಹಲವು ವರ್ಷ ಇದ್ದ ವ್ಯಕ್ತಿಯೊಬ್ಬರು ‘ಗಿಣಿ ರಾಮ’ ಧಾರಾವಾಹಿ ಸೆಟ್ನಲ್ಲಿ ನಯನಾ ಜೊತೆ ಕಠಿಣವಾಗಿ ನಡೆದುಕೊಂಡರು. ನಯನಾ ಕೂಡ ಅದೇ ಟೋನ್ನಲ್ಲಿ ಉತ್ತರ ಕೊಟ್ಟರಂತೆ. ಈ ವಿಚಾರ ಆ ವ್ಯಕ್ತಿಯ ಅಹಂಗೆ ಪೆಟ್ಟು ನೀಡಿತು. ಅಂದಿನಿಂದ ನನ್ನ ಜೀವನ ನರಕವಾಗಿ ಹೋಯಿತು ಎಂದಿದ್ದಾರೆ.
‘ಅಲ್ಲಿ ನನ್ನ ತಪ್ಪಿರಲಿಲ್ಲ. ಆದರೆ, ಅವರು ದ್ವೇಷ ಸಾಧಿಸಲು ಪ್ರಾರಂಭಿಸಿದರು. ಎಲ್ಲರೂ ತುಂಬಾನೇ ಖುಷಿಯಿಂದ ಬಂದು ಮಾತನಾಡುತ್ತಿದ್ದರು. ಆದರೆ, ಆ ವ್ಯಕ್ತಿ ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಂಡರು. ಯಾರಾದರೂ ಬಂದು ನನ್ನ ಬಳಿ ಮಾತನಾಡಿದರೆ, ಏನೋ ಲಲ್ಲೆ ಹೊಡಿತೀಯಾ ಎನ್ನುತ್ತಿದ್ದರು. ನಾನು ಕುಗ್ಗಿ ಹೋದೆ. ಆ್ಯಕ್ಷನ್ ಎನ್ನುವಾಗ ಕೆಟ್ಟ ಕಮೆಂಟ್ ಮಾಡುತ್ತಿದ್ದರು. ಆ ಬಳಿಕ ಅದು ನಿನಗಲ್ಲ ಎನ್ನುತ್ತಿದ್ದರು. ವಾಹಿನಿಯವರಿಗೆ ಹೇಳಿದೆ. ಆದರೆ ಹೆಚ್ಚೇನು ಬದಲಾವಣೆ ಆಗಿಲ್ಲ’ ಎಂದಿದ್ದಾರೆ.
‘ನಾನು ಕುಗ್ಗಿ ನಿತ್ಯ ಅಳುತ್ತಿದ್ದೆ. ನಾನು ಇಷ್ಟಪಟ್ಟು ಬಂದ ಕ್ಷೇತ್ರ ಇದಾಗಿತ್ತು. ಸೆಟ್ನಲ್ಲಿ ಆದ ಫ್ರಸ್ಟ್ರೇಷನ್ನ ಆಪ್ತರ ಮೇಲೆ ಹಾಕುತ್ತಿದ್ದೆ. ಯಾರೊಬ್ಬರೂ ನನ್ನ ಸಹಾಯಕ್ಕೆ ಬಂದಿಲ್ಲ. ನಾನು ಧಾರಾವಾಹಿ ಬಿಡುವ ನಿರ್ಧಾರ ತೆಗೆದುಕೊಂಡೆ. ನೀನು ಬಿಟ್ಟರೆ ಧಾರಾವಾಹಿ ಮುಗಿಯುತ್ತದೆ ಎಂದರು. ತೊಂದರೆ ಇಲ್ಲ. ನಾನು ಬಿಟ್ಟ ಬಳಿಕ ಧಾರಾವಾಹಿ ಪೂರ್ಣಗೊಂಡಿತು’ ಎಂದು ನಯನಾ ಹೇಳಿದ್ದಾರೆ.
‘ಪ್ರತಿ ದಿನ ನನಗೆ ಮೂರು 3,600 ರೂಪಾಯಿ ಕೊಡುತ್ತಿದ್ದರು. 15 ಸಾವಿರ ಕೊಡ್ತಾರೆ ಅನ್ನೋದಲ್ಲ ಸುಳ್ಳು. ಪ್ರತಿ ತಿಂಗಳೂ ಹೊಸ ಸೀರೆ ತೆಗೆದುಕೊಳ್ಳಬೇಕು’ ಎಂದು ನಯನಾ ಬೇಸರ ವ್ಯಕ್ತಪಡಿಸಿದ್ದಾರೆ.