ಕೊಡಗು:- ನಾಡ ಬಂದೂಕಿನಿಂದ ಗುಂಡು ಹೊಡೆದು ಸ್ವಂತ ಅಣ್ಣನನ್ನೇ ತಮ್ಮ ಕೊಲೆಗೈದ ಘಟನೆ ಕೊಡಗಿನಲ್ಲಿ ಜರುಗಿದೆ.
ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂ. ವ್ಯಾಪ್ತಿಯ ವಣಚಲು ಗ್ರಾಮದಲ್ಲಿ ಈ ಘಟನೆ ಜರುಗಿದೆ. 53 ವರ್ಷದ ಅಪ್ಪಣ್ಣ ಕೊಲೆಯಾದ ದುರ್ದೈವಿ. ಸಹೋದರ ಮಾಚಯ್ಯ ಎಂಬಾತನಿಂದ ಕೃತ್ಯ ನಡೆದಿದೆ.
ಕೃತ್ಯದ ಬಳಿಕ ಮಾಚಯ್ಯ ಬಂದೂಕಿನೊಂದಿಗೆ ಪರಾರಿ ಆಗಿ ಕಾಫಿ ತೋಟದಲ್ಲಿ ಬಚ್ಚಿಟ್ಟುಕೊಂಡಿದ್ದ, ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಳ್ಳಭಟ್ಟಿ ಕುಡಿದು ಸಹೋದರರು ಹೊಡೆದಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.



