ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 5-6 ದಿನಗಳ ಹಿಂದೆಯೇ ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ವಿಷಯ ಇಂದು ಬೆಳಕಿಗೆ ಬಂದಿದೆ. ಇನ್ನೂ ಗುರುಪ್ರಸಾದ್ ಆತ್ಯಹತ್ಯೆಯ ಸುದ್ದಿ ಕೇಳಿ ಹಿರಿಯ ನಟಿ ಮಾಳವಿಕಾ ಕಂಬನಿ ಮಿಡಿದಿದ್ದಾರೆ.
ಹೀಗೆಲ್ಲಾ ಆಗಿದ್ರೂ ಅವರ ಕುಟುಂಬಸ್ಥರು ಎಲ್ಲಿ ಅಂತ ಅಚ್ಚರಿ ಆಗುತ್ತಿದೆ. ಏಕಾಂಗಿಯಾಗಿ ಬದುಕನ್ನು ಅಂತ್ಯಗೊಳಿಸಿಕೊಂಡಿರೋದು ಭಾರೀ ಬೇಜಾರಿನ ಸಂಗತಿ. ಎಷ್ಟೋ ಜನರಿಗೆ ಅದೆಷ್ಟೋ ಕಷ್ಟಗಳು ಇರುತ್ತವೆ. ಕಲಾವಿದರು ಕೂಡ ಮನುಷ್ಯರೇ ತಾನೇ. ಎಲ್ಲರಿಗೂ ಬುದ್ಧಿವಾದ ಹೇಳುತ್ತಿದ್ದ ವ್ಯಕ್ತಿಯಾಗಿದ್ದರು. ಅವರು ತುಂಬಾ ಓದಿಕೊಂಡಿದ್ದರು. ಬಹಳ ಪ್ರತಿಭಾನ್ವಿತರಾಗಿದ್ದರು. ಹಾಗಿದ್ರೂ ಕೂಡ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದಿತ್ತು.
‘ಮನ್ವಂತರ’ ಸೀರಿಯಲ್‌ಗೆ ಸಹಾಯಕ ನಿರ್ದೇಶಕರಾಗಿ ಗುರುಪ್ರಸಾದ್ ಕೆಲಸ ಶುರು ಮಾಡಿದರು. ಅವರು ಸೆಟ್‌ನಲ್ಲಿ ವಿಪರೀತ ಮಾತನಾಡೋರು. ಸದಾ ಉತ್ಸಾಹದಿಂದ ಓಡಾಡಿಕೊಂಡಿದ್ದರು. 20 ವರ್ಷಗಳ ಹಿಂದೆಯೇ ಅವರ ಬರವಣಿಗೆ ಚೆನ್ನಾಗಿತ್ತು.
ಅಷ್ಟೆಲ್ಲಾ ತಿಳಿದುಕೊಂಡವರು ಹೀಗೆ ಮಾಡಿಕೊಂಡಿರೋದು ಸರಿಯಲ್ಲ. ಅವರ ಆತ್ಮಹತ್ಯೆಯ ನಿರ್ಧಾರವನ್ನು ಯಾಕೆ ಯಾರ ಕೈಯಿಂದಲೂ ತಪ್ಪಿಸೋಕೆ ಆಗಿಲ್ಲ ಅದೇ ಬೇಜಾರು. ಅವರಿಗೆ 52 ವರ್ಷ, ಸಾಯೋ ಅಂತಹ ವಯಸ್ಸೇ ಅಲ್ಲ. ಅದೆಷ್ಟು ಜನ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಅವತ್ತು ಯಾರಾದರೂ ಅವರ ಮನೆಗೆ ಹೋಗಿ ಬಿಟ್ಟಿದ್ರೆ, ಕರೆ ಮಾಡಿದಿದ್ರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು ಎಂದು ಮಾಳವಿಕಾ ಭಾವುಕರಾಗಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ಶವ ಪತ್ತೆ ಆಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ತನಿಖೆ ನಡೆಯುತ್ತಿದೆ. ಗುರುಪ್ರಸಾದ್ ನಿಧನಕ್ಕೆ ಅಭಿಮಾನಿಗಳು ಮತ್ತು ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.