ಸ್ಯಾಂಡಲ್ವುಡ್ ನಟ ದರ್ಶನ್ ಅವರ ಅಭಿಮಾನಿಗಳು ಹಾಗೂ ನಟ ಪ್ರಥಮ್ ನಡುವಿನ ವಾರ್ ಸಮರ ಇದೀಗ ಸಖತ್ ಸದ್ದು ಮಾಡುತ್ತಿದೆ. ದರ್ಶನ್ ಅಭಿಮಾನಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾಕ್ಸಮರ ಮುಂದುವರೆದಿದ್ದು ಇದೀಗ ಪ್ರಥಮ್ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಈ ಬಗ್ಗೆ ನಟ ಪ್ರಥಮ್ ಲಿಖಿತ ದೂರು ದಾಖಲಿಸಿದ್ದಾರೆ.
ಲಿಖಿತ ದೂರು ನೀಡಿದ ಪ್ರಥಮ್, ನನಗೆ ತೇಜೋವಧೆ ಮಾಡ್ತಿದ್ದಾರೆ. ಎರಡು ಸಾವಿರ ಪೇಜ್ ನಲ್ಲಿ ಟ್ರೋಲ್ ಆಗ್ತಿದೆ. ನನಗೆ ಹೆಚ್ಚು ಕಡಿಮೆ ಆದರೆ ನೀವು ಕಾರಣ ಎಂದಿದ್ದಾರೆ.
ಏನು ಕಿತ್ಕೊಳೋಕೆ ಆಗಲ್ಲ ಅಂತಾರೆ. ವಿಗ್ ನಲ್ಲಿ ಏನ್ ಕಿತ್ಕೊಳೋಕೆ ಆಗಲ್ಲ ಸರ್. ನಾನು ಊರಿಗೆ ಹೋಗ್ತೀನಿ. ಬೆಂಗಳೂರು ಬಿಟ್ಟು ಹೋಗ್ತೀನಿ. ಅಷ್ಟು ಬೆದರಿಕೆ ಇದೆ. ನನ್ನದು ಚಾಮರಾಜನಗರ, ಊರಿಗೆ ಹೋಗ್ತೀನಿ. ಅಮರಣಾಂತ ಉಪವಾಸ ಮಾಡುತ್ತೇನೆ ಎಂದಿರುವ ಪ್ರಥಮ್ ದರ್ಶನ್ ವಿಡಿಯೋ ಮಾಡಿ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು ಎಂದು ತಿಳಿಸಿದ್ದಾರೆ.