ಮಸ್ಕಿ:- ತಾಲೂಕಿನ ಮುದ್ದಾಪುರ ಗ್ರಾಮದ ಕೆಬಿ ಮುಂದೆ ರಾಷ್ಟ್ರಿಯ ಹೆದ್ದಾರಿ NH 150 A ಮಸ್ಕಿ ಮತ್ತು ಸಿಂಧನೂರು ಮಾರ್ಗ ಹೈವೇನಲ್ಲಿ ಸುಮರು ರಾತ್ರಿ 9:45 ಕ್ಕೆ ಸರ್ಕಾರಿ ಬಸ್ಸು ಮತ್ತು ಬೈಕ್ ನಡುವೆ ಮುಖ ಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲೇ 2 ( ಇಬ್ಬರು ) ಬೈಕ್ ಸವಾರರು ಮೃತ ಪಟ್ಟಿದ್ದಾರೆ.
Advertisement
ಮೃತ ಪಟ್ಟ ವ್ಯಕ್ತಿ ಗಳನ್ನು ಸಿಂಧನೂರು ತಾಲೂಕಿನ ಕುನ್ನಾಟಗಿ ಗ್ರಾಮದ ದುರುಗೇಶ್ ಮತ್ತು ಬೀರಪ್ಪ ಎಂದು ಗುರುತಿಸಲಾಗಿದೆ. ಇವರು ಮಸ್ಕಿ ಇಂದ ಕೆಲಸ ಮುಗಿಸಿಕೊಂಡು ಕುನ್ನಾಟಗಿ ಗೆ ತುಂಬಾ ವೇಗವಾಗಿ ಹೋಗುವಾಗ ಸಿಂಧನೂರು ಇಂದ ಕಲ್ಬುರ್ಗಿ ಮಾರ್ಗವಾಗಿ ಹೋಗುತ್ತಿದ್ದ ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೃತ ಪಟ್ಟಿದ್ದಾರೆ. ಬಸ್ ನಲ್ಲಿ ಇರುವ ಚಾಲಕ ಮತ್ತು ಕಂಡಕ್ಚರ್ ಹಾಗೂ ಜನರಿಗೆ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.