ವಿಜಯಸಾಕ್ಷಿ ಸುದ್ದಿ, ಮುಳಗುಂದ : ಶುದ್ಧವಾದ ನೀರು ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ.ಎ ಹೇಳಿದರು.
ಅವರು ಪಟ್ಟಣದ ಚಿಂಚಿಲಿ ಕ್ರಾಸ್ ಬಳಿ ಪ.ಪಂ ಮುಳಗುಂದ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಶುದ್ಧಗಂಗಾ ಘಟಕ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿಯಿಂದ ನಿರ್ಮಿಸಿದ 494ನೇ ಶುದ್ಧಗಂಗಾ ಘಟಕ ಇದಾಗಿದ್ದು, ಜಿಲ್ಲಾದ್ಯಾಂತ 22 ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಬ್ಬರೂ ಶುದ್ಧವಾದ ನೀರನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಾಹಾಂತೇಶ ನೀಲಗುಂದ ವಹಿಸಿದ್ದರು. ಎಸ್.ಸಿ. ಬಡ್ನಿ, ಮಾಹಾದೇವಪ್ಪ ಗಡಾದ, ಪಾರವ್ವ ಅಳ್ಳಣ್ಣವರ, ಯಲ್ಲವ್ವ ಕವಲೂರ, ಬಿ.ವಿ. ಸುಂಕಾಪೂರ, ಡಾ. ಎಸ್.ಸಿ. ಚವಡಿ, ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೆದ, ಪ್ರಕಾಶ ಮದ್ದಿನ, ಧ.ಗ್ರಾ. ವಲಯ ಮೇಲ್ವಿಚಾರಕಿ ಜಯಶ್ರೀ ಲಕ್ಕುಂಡಿ, ಶಿರಹಟ್ಟಿ ಕ್ಷೇತ್ರ ಯೋಜನಾಧಿಕಾರಿ ಓಂ ಮರಾಠೆ, ಶುದ್ಧಗಂಗಾ ಮೇಲ್ವಿಚಾರಕ ಧರ್ಮರಾಜ.ಬಿ ಇದ್ದರು.