ಅಡವಿಸೋಮಾಪುರದಲ್ಲಿ ಆರೋಗ್ಯ ತಪಾಸಣಾ ಶಿಬಿರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಗದಗ ಜಿಮ್ಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರ ತಂಡದಿಂದ ಅಡವಿಸೋಮಪುರ ಗ್ರಾಮದಲ್ಲಿ ಮನೆ ಸರ್ವೆ ಮಾಡಿ ಗದಗ ಜಿಮ್ಸ್ ವೈದ್ಯರ ತಂಡ, ಅಡವಿಸೋಮಾಪುರ ಗ್ರಾಮ ಪಂಚಾಯಿತಿ, ಆಯುಷ್ಮಾನ್ ಆರೋಗ್ಯ ಮಂದಿರದಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

Advertisement

ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಹಲವಾರರು ರೋಗಗ ಬಗ್ಗೆ ಜಿಮ್ಸ್ ಸಮುದಾಯ ಆರೋಗ್ಯ ವಿಭಾಗದ ಡಾ. ಅರವಿಂದ್, ಡಾ. ಜನ್ನತ, ಡಾ. ಗುರಪ್ಪ, ಡಾ. ಕಿರಣ್, ಡಾ. ಜಿನೋನಾಥ, ಮಕ್ಕಳ ತಜ್ಞರಾದ ಡಾ. ಜಿತೇಂದ್ರ, ಜೀವರಸಾಯನಶಾಸ್ತç ವಿಭಾಗದ ಡಾ. ಶಶಿಕುಮಾರ ಆರೋಗ್ಯ ತಪಾಸಣೆ ಮಾಡಿದರು.

ಶಿಬಿರಕ್ಕೆ ಗ್ರಾ.ಪಂ ಉಪಾಧ್ಯಕ್ಷ ಶಾಮಸುಂದರ ಎಂ.ಡAಬಳ ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಪ್ರೇಮಾ ಹಟ್ಟಿಯವರು ಭೇಟಿ ನೀಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಶಿದ್ದಪ್ಪ ಎನ್.ಲಿಂಗದಾಳ ಶಾಲಾ ಆವರಣದಲ್ಲಿ ಸಸಿ ನೆಟ್ಟರು. ಶಿಕ್ಷಕರಾದ ಮಂಜುನಾಥ ದೊಡ್ಡಮನಿ, ಎಸ್.ಬಿ. ಗಡಾದ, ಸಮೀಕ್ಷಾ ತಂಡದ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಯ್ಯ ಕಲ್ಮಠ, ಬಸವರಾಜ್ ಬಡಿಗೇರ, ಆರ್.ಜಿ. ಸುರೇಶ ಕುಲಕರ್ಣಿ, ಹನುಮಂತ ಬಳಗಾನೂರ ವೈದ್ಯಕೀಯ ಸೇವೆಯನ್ನು ನೀಡಿದರು.

ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ದೊಡ್ಡಮನಿ, ಪರಶುರಾಮ್ ಹೊಂಬಳ, ಆಶಾ ಕಾರ್ಯಕರ್ತೆ ಮಾಲಾ ಮೇವುಂಡಿ, ಉಮಾ ಖಾನಾಪೂರ, ರೇಣುಕಾ ಪುರದ ಉಪಸ್ಥಿತರಿದ್ದರು ಎಂದು ಮಲ್ಲಯ್ಯ ಕಲ್ಲಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here