ವಿಜಯಸಾಕ್ಷಿ ಸುದ್ದಿ, ನರಗುಂದ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ನರಗುಂದ ಇವರ ವತಿಯಿಂದ ಶಿರೋಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಕಿಶೋರಿಯರಿಗೆ ಆರೋಗ್ಯ ತಪಾಸಣೆ ಹಾಗೂ ಜಾಥಾ ಕಾರ್ಯಕ್ರಮ ಜರುಗಿತು.
ಪ್ರಾಸ್ತಾವಿಕವಾಗಿ ಕಾರ್ಯಕ್ರಮ ಸಂಯೋಜಕ ಮಂಜು ಗುಗ್ಗರಿ ಮಾತನಾಡಿ, ವಿಶೇಷವಾಗಿ ಇಂದಿನ ಜೀವನ ಪದ್ಧತಿಯಿಂದ ಕಿಶೋರಾವಸ್ಥೆಯಲ್ಲಿ ರಕ್ತ ಹೀನತೆ ಉಂಟಾಗಿ ವಯಸ್ಸಿಗೆ ತಕ್ಕ ತೂಕ ಹಾಗೂ ಎತ್ತರ ಇಲ್ಲದಿರುವದು ಪ್ರಮುಖ ಸಮಸ್ಯೆಯಾಗಿದೆ ಎಂದರು.
ಮೇಲ್ವಿಚಾರಕಿ ಪರಿಮಳ ಹೂಗಾರ ಮಾತನಾಡಿ, 10-19 ವರ್ಷದೊಳಗಿನ ಕಿಶೋರಿಯರು ವಯಕ್ತಿಕ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವದು ಅತ್ಯವಶ್ಯಕವಾಗಿದೆ ಎಂದರು.
ವೈದ್ಯಾಧಿಕರಿ ಡಾ. ರಿಯಾಜ್ ನೀರಲಗಿ ಮಾತನಾಡಿ, ಕಿಶೋರಿಯರು ಪ್ರಸ್ತುತ ಹೆಚ್ಚಾಗಿ ಕಾಡುತ್ತಿರುವ ರಕ್ತಹೀನತೆಯನ್ನು ಸವಾಲಾಗಿ ಸ್ವೀಕರಿಸಿ ಅದಕ್ಕೆ ಸಮತೋಲಿತ ಆಹಾರ, ಸ್ಥಳೀಯವಾಗಿ ದೊರೆಯುವ ತರಕಾರಿ, ಹಣ್ಣುಗಳನ್ನು ಕಾಲಕಾಲಕ್ಕೆ ಸೇವಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಯು. ಜಿಗಳೂರ, ಸುಶೀಲಾ ಕುಪ್ಪಸ್ತ, ಎಸ್.ಜೆ. ಬಾಗಲಕೋಟ, ಶ್ರೀದೇವಿ ಪಾಟೀಲ, ಎಮ್.ವಾಯ್. ಬನ್ನಿಗಿಡದ, ವಿ.ಎಸ್. ಹಂಚಿನಮನಿ, ಈರವ್ವ ಮಂಟೂರಮಠ, ಸಹಾಯಕಿಯರು ಪಾಲ್ಗೊಂಡಿದ್ದರು.