ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ..!

0
Keep our surroundings clean for dengue control
Spread the love

ಬೆಂಗಳೂರು:- ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿ (guidelines) ಹೊರಡಿಸಲಾಗಿದೆ. ಆ ಮೂಲಕ ಡೆಂಗ್ಯೂ ನಿರ್ವಹಣೆಯ ಎಲ್ಲಾ ಗೈಡ್ ಲೈನ್ಸ್​ ಪಾಲಿಸುವಂತೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಡಿಹೆಚ್​ಒಗಳಿಗೆ ಸೂಚನೆ ನೀಡಲಾಗಿದೆ.

Advertisement

ಮಾರ್ಗಸೂಚಿಗಳು ಹೀಗಿವೆ

  • ಕಂಟ್ರೋಲ್ ರೂಮ್ ಅಥವಾ ವಾರ್ ರೂಂ ಸ್ಥಾಪನೆ. ಪಾಲಿಕೆ, ಜಿಲ್ಲಾಮಟ್ಟದಲ್ಲಿ ಟಿಎಸಿ (TAC) ಸಭೆ ಮಾಡುವಂತೆ ಸೂಚಿಸಲಾಗಿದೆ.
  • ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಗೊಮ್ಮೆ ಮನೆ ಮನೆ ಸರ್ವೆ ಮಾಡಬೇಕು.
  • ಪ್ರತಿ ಶುಕ್ರವಾರ ಫೀಲ್ಡ್ ವರ್ಕ್ ಮಾಡಿ ಲಾರ್ವ ನಾಶ ಪಡಿಸಬೇಕು.
  • ಡೆಂಗ್ಯೂ ಹಾಟ್ ಸ್ಪಾಟ್ ಗುರುತಿಸಬೇಕು ಅದರ ಮಾಹಿತಿಯನ್ನ ಕಂಟ್ರೋಲ್ ರೂಂಗೆ ನೀಡಬೇಕು.
  • ಹಾಟ್ ಸ್ಪಾಟ್​ಗಳಲ್ಲಿ ಲಾರ್ವ ನಾಶವನ್ನ ತೀವ್ರಗತಿಗೊಳಿಸಬೇಕು.
  • ಫೀವರ್ ಕ್ಲಿನಿಕ್​ಗಳನ್ನ ತುರ್ತಾಗಿ ತೆರೆಯಬೇಕು.
  • ಹಾಟ್ ಸ್ಪಾಟ್​​ಗಳಲ್ಲಿ ಬಿಪಿಎಲ್​ (BPL) ಕುಟುಂಬಗಳಿಗೆ ಸೊಳ್ಳೆನಿರೋಧಕ ಬೇವಿನ ಎಣ್ಣೆಯನ್ನ ಕೈಕಾಲುಗಳಿಗೆ ಹಚ್ಚಲು ನೀಡಬೇಕು.
  • ಡೆಂಗ್ಯೂ ಗುಣಲಕ್ಷಣಗಳು ಬಂದಾಗಿನ 14 ದಿನಗಳ ಕಾಲ ರೋಗಿಯ ಮಾಹಿತಿಯನ್ನ ವಾರ್ ರೂಂಗೆ ತಿಳಿಸಬೇಕು.
  • ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 5 ಬೆಡ್​ಗಳನ್ನ ಮೀಸಲಿಡಬೇಕು.
  • ಟೆಸ್ಟಿಂಗ್ ಕಿಟ್, ಔಷಧ, ವೈಟ್ ಪ್ಲೇಟ್ ಲೇಸ್ಟ್​ಗಳು ಇದಿಯಾ ಎಂದು ಖಚಿತ ಪಡಿಸಿ ಮಾಹಿತಿ ನೀಡಬೇಕು.
  • ಡೆಂಗ್ಯೂ ನಿರ್ವಹಣೆ ಸಂಬಂಧ ಶಿಷ್ಟಾಚಾರನ್ನು ಕಡ್ಡಾಯವಾಗಿ ಎಲ್ಲಾ ವೈದ್ಯರು ಪಾಲಿಸುವುದು.
  • ಮೆಡಿಕಲ್​ ಕಾಲೇಜುಗಳ famili adoption programme ಅನ್ನು ಡೆಂಗ್ಯೂ ಸಮಸ್ಯಾತ್ಮಕ ಗ್ರಾಮ, ವಾರ್ಡ್​ಗಳಿಗೆ ವಿಸ್ತರಿಸುವುದು.
  • ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ, ಡೆಂಗ್ಯೂ ಪ್ರಕರಣಗಳ ನಿಯಂತ್ರಣಕಾಗಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

Spread the love

LEAVE A REPLY

Please enter your comment!
Please enter your name here