ಯೋಗ ಗ್ರಂಥಗಳ ಅಧ್ಯಯನದಿಂದ ಆರೋಗ್ಯದರಿವು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಂಥಗಳು ಕೂಡ ಅಕ್ಷಯ ಪಾತ್ರೆಗಳಿದ್ದಂತೆ. ಯಾವುದೇ ಗ್ರಂಥಗಳಿರಲಿ, ಅವು ನಮಗೆ ಹೆಚ್ಚಿನ ಜ್ಞಾನ ಕೊಡುತ್ತವೆ. ಯೋಗ ಗ್ರಂಥಗಳು ವಿಶೇಷವಾಗಿ ಆರೋಗ್ಯ ಜ್ಞಾನ ನೀಡುತ್ತವೆ. ಯೋಗ ಗ್ರಂಥಗಳ ಅಧ್ಯಯನದಿಂದ ನಮ್ಮಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಆರೋಗ್ಯದ ಅರಿವು ಮೂಡುವುದು. ಆಗ ನಾವು ಆರೋಗ್ಯವಂತರಾಗಿರಲು ಪ್ರಯತ್ನಿಸುವೆವು. ಆರೋಗ್ಯವು ನಮ್ಮೆಲ್ಲ ಆಶೆ, ಆಕಾಂಕ್ಷೆ, ಇಷ್ಟಾರ್ಥಗಳನ್ನು ಪೂರೈಸಲು ಸಹಕಾರಿಯಾಗುವುದು ಎಂದು ವಿಜಯನಗರದ ಆನೆಗುಂದಿ ಸಂಸ್ಥಾನದ ರಾಜ ವಂಶಸ್ಥರಾದ ಶ್ರೀರಾಜಾಶ್ರೀಕೃಷ್ಣದೇವರಾಯರ ಅಭಿಪ್ರಾಯಪಟ್ಟರು.

Advertisement

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ನಡೆದ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಗಿರಿಜಾ ಎಲ್.ಎಸ್. ಇವರು ರಚಿಸಿದ ಗ್ರಂಥವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಪ್ರೊ. ಲಕ್ಷ್ಮಣ ಕುಮಾರರು ಯೋಗ ಪ್ರಸಾರ, ಪ್ರಚಾರ ಸೇವೆಯಲ್ಲಿ ಹಗಲಿರುಳು ದುಡಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯೋಗ ಅಧ್ಯಯನ ವಿಭಾಗ ಸ್ಥಾಪಿಸಿದವರು. ಕಾಕತಾಳೀಯ ಎನ್ನುವಂತೆ 50 ವರ್ಷಗಳ ಹಿಂದೆ ಯೋಗ ಪಾಠಶಾಲೆ ಉದ್ಘಾಟನಾ ಸಮಾರಂಭದಲ್ಲಿ 50 ವರ್ಷಗಳ ಹಿಂದೆ ಈ ಯೋಗ ಪಾಠಶಾಲೆ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನಯುಕ್ತ ಯೋಗ ಉಪನ್ಯಾಸ ನೀಡಿದ ಧೀಮಂತರು. ಇಂಥವರ ಗ್ರಂಥ ಯೋಗ ಪಾಠಶಾಲೆಯ ಸುವರ್ಣೋತ್ಸವದಲ್ಲಿ ಬಿಡುಗಡೆಯಾಗಿರುವುದು ಯೋಗಾಯೋಗವಾಗಿದೆ. ಇವರ ಮಾರ್ಗದರ್ಶನದಲ್ಲಿ ಯೋಗ ಇನ್ನೂ ಹೆಚ್ಚು ಪ್ರಚಾರ-ಪ್ರಸಾಗೊಳ್ಳಲೆಂದು ಶುಭ ಹಾರೈಸಿದರು.

ಸುವರ್ಣೋತ್ಸವ ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಡಿ.ಆರ್. ಪಾಟೀಲ, ಪ್ರೊ. ಲಕ್ಷ್ಮಣ ಕುಮಾರ ಸಣ್ಣೆಲ್ಲಪ್ಪನವರ, ಗ್ರಂಥ ಪರಿಚಯ ತಿಳಿಸಿದ ಎ.ಇ.ಕಾಂ ಇಂಡಿಯಾದ ನಿರ್ದೇಶಕ ಶ್ರೀಕಂಠ ಚೌಕಿಮಠ, ಕ.ವಿ.ವಿ ಯೋಗ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ರಮೇಶ ಎಂ.ಪಿ, ಉಪನ್ಯಾಸ ನೀಡಿದ ಮಣಿಪಾಲ (ಆಸ್ಪತ್ರೆ) ನರರೋಗ ತಜ್ಞರಾದ ಡಾ. ಸಂತೋಷ ಎನ್.ಎಸ್, ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ಆಡಳಿತ ಡೀನ್ ಪ್ರೊ. ಬಿ.ಎಲ್. ದೇಸಾಯಿ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯP್ಷÀ ಧನೇಶ ದೇಸಾಯಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವ ಪದಾಧಿಕಾರಿ ಹಾಗೂ ಸದಸ್ಯರೆಲ್ಲರ ಪರವಾಗಿ ಯೋಗ ಪಾಠಶಾಲೆಯ ನಿರ್ದೇಶಕ, ಯೋಗಾಚಾರ್ಯ ಕೆ.ಎಸ್. ಪಲ್ಲದ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಸುವರ್ಣೋತ್ಸವ ಸವಿನೆನಪಿನ `ಯೋಗದೀಪ್ತಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯೋಗ ಇಂದು ಎಲ್ಲರಿಗೂ ಬೇಕಾಗಿದೆ. ಗದಗ ಜಿಲ್ಲಾ ಯೋಗ ಕ್ಷೇತ್ರ ಶ್ರೀಮಂತವಾಗಬೇಕು, ಅದಕ್ಕಾಗಿ ಯೋಗ ಪಾಠಶಾಲೆ ಯೋಗ ಮಹಾವಿದ್ಯಾಲಯವಾಗಿ ರೂಪುಗೊಂಡು ಹೆಚ್ಚಿನ ಕಾರ್ಯ ಸಾಧನೆ ಸಾಧಿಸಬೇಕು. ಈ ಕಾರ್ಯದ ಯಶಸ್ಸಿಗೆ ಕೈಲಾದಷ್ಟು ಸಹಾಯ-ಸಹಕಾರ ನೀಡಲು ಸಿದ್ಧನಿರುವೆ ಎಂದು ಭರವಸೆ ನೀಡಿದರು.


Spread the love

LEAVE A REPLY

Please enter your comment!
Please enter your name here