ಬೆಂಗಳೂರು:– ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಕಳೆದ ವರ್ಷ ಅಂದ್ರೆ 2024 ರಲ್ಲಿ ಸಂಭವಿಸಿದ್ದ ಬಾಣಂತಿಯರ ಸಾವಿನ ಸಂಖ್ಯೆ ಬಹಿರಂಗಪಡಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, 2024-25 ರ ವರ್ಷದಲ್ಲಿ ಒಟ್ಟು 530 ಬಾಣಂತಿಯರು ಸಾವನ್ನಪ್ಪಿದ್ದಾರೆ. ಟೆಕ್ನಿಕಲ್ ಕಮಿಟಿ ವರದಿಯ ಶಿಫಾರಸು ಸರ್ಕಾರ ಪಡೆದಿದೆ. ಅಗತ್ಯ ಔಷಧ ಸಲಕರಣೆ, ವೈದ್ಯರು ಜವಾಬ್ದಾರಿ ನಿರ್ವಹಿಸಿದ್ದರೇ, ಶೇ 70 ರಷ್ಟು ಬಾಣಂತಿಯರ ಸಾವುಗಳನ್ನು ನಾವು ತಡೆಯಬಹುದಿತ್ತು. ರಿಂಗರ್ ಲ್ಯಾಕ್ಟೇಟ್ ಸಮಸ್ಯೆಯಿಂದ 18 ಮಂದಿಯ ಬಾಣಂತಿಯರ ಸಾವಾಗಿದೆ. ಡಿಸೆಂಬರ್ನಿಂದ ಇದನ್ನು ಸರಿಪಡಿಸಲು ತಯಾರಿ ಮಾಡಿದ್ದೇವೆ ಫ್ರೆಷ್ ಫ್ರೋಜನ್ ಪ್ಲಾಸ್ಮಾ ಇದ್ದಿದ್ರೆ ಸಾವಿನ ಸಂಖ್ಯೆ ತಡೆಯಬಹುದಿತ್ತು ಎಂದು ಹೇಳಿದರು.
ಮೊದಲೇ ರಿಸ್ಕ್ ಪ್ರಮಾಣ ಗೊತ್ತಿದ್ದರೆ ಹೆಚ್ಚಿನ ಚಿಕಿತ್ಸೆ ನೀಡಬಹುದಿತ್ತು. ಬಹಳ ಸುಧಾರಣೆ ಮಾಡುವ ಅವಶ್ಯಕತೆ ಇದೆ. ಬಳ್ಳಾರಿಯಲ್ಲಿ 5 ಸಾವು ಆಗಿರುವಂತೆ 13 ಕಡೆಗಳಲ್ಲೂ ಹೀಗೆ ಆಗಿದೆ ಎಂಬ ಅನುಮಾನ ಇದೆ. 10 ಮಂದಿ ವೈದ್ಯರಿಗೆ ನಿರ್ಲಕ್ಷ್ಯದ ಕಾರಣಕ್ಕೆ ನೊಟೀಸ್ ನೀಡಿದ್ದೇವೆ ಎಂದು ತಿಳಸಿದರು.
ಬಾಣಂತಿಯರ ಸಾವಿನ ಸಂಖ್ಯೆ:
2020-21 ರಲ್ಲಿ 714 ಸಾವು
2021-22 ರಲ್ಲಿ 635 ಸಾವು
2022-23 ರಲ್ಲಿ 594 ಸಾವು
2023-24 ರಲ್ಲಿ 550 ಸಾವು
2024-25 ರಲ್ಲಿ 530 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.