ವಿಜಯಸಾಕ್ಷಿ ಸುದ್ದಿ, ಮುಳಗುಂದ : ಆರೋಗ್ಯ ವೃದ್ಧಿಗೆ ಆಯುಷ್ ಪದ್ಧತಿ ತುಂಬಾ ಸಹಕಾರಿಯಾಗಿದೆ ಎಂದು ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಮ್.ಎಸ್. ಉಪ್ಪಿನ ಹೇಳಿದರು.
ಅವರು ಪಟ್ಟಣ ಸಮೀಪದ ಸೊರಟೂರ ಗ್ರಾಮದ ಕಾಲಭೈರವ ಸಮುದಾಯ ಭವನದಲ್ಲಿ ಆಯುಷ್ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಹತ್ತು ಹಲವಾರು ರೋಗಗಳಿಂದ ಸಾಕಷ್ಟು ಸಾವು ನೋವುಗಳಾಗುತ್ತಿದ್ದು, ಪ್ರತಿಯೊಬ್ಬರೂ ಆರೋಗ್ಯವಂತರಾಗಲು ಆಯುಷ್ ಪದ್ಧತಿಯಲ್ಲಿ ನೈಸರ್ಗಿಕ ರೋಗ ನಿರೋಧಕ ಶಕ್ತಿ ಅಡಗಿರುವುದರಿಂದ ಆಯುಷ್ ಆರೋಗ್ಯ ಪದ್ಧತಿ ತುಂಬಾ ಸಹಕಾರಿಯಾಗುವುದು ಎಂದರು.
ಗ್ರಾ.ಪಂ ಅಧ್ಯಕ್ಷರಾದ ಚಂದ್ರವ್ವ ಓಂಕಾರಿ ಮಾತನಾಡಿ, ಸರಕಾರ ಕಾಲ ಕಾಲಕ್ಕೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಆರೋಗ್ಯ ಜಾಗೃತಿ ಜೊತೆಯಲ್ಲಿ ತಪಾಸಣೆ ಜರುಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೋಳ್ಳಬೇಕು ಎಂದರು.
ಗ್ರಾ.ಪಂ ಉಪಾಧ್ಯಕ್ಷ ಎಂ.ಎಸ್. ಪಾಟೀಲ್, ಸೊರಟೂರ ಆಯುಷ್ ಆರೋಗ್ಯ ಕೇಂದ್ರದ ಡಾ. ಎಸ್.ಆರ್. ಮಡಿವಾಳರ, ಡಾ. ವಿರೇಶ ಆಡೂರ, ಯೋಗ ಶಿಕ್ಷಕ ಎಚ್.ಎಸ್. ಗಾರವಾಡ, ಪರಶುರಾಮ ಹೂಗಾರ, ಗಂಗಮ್ಮ ಗಾರವಾಡ, ವೀಣಾ ಮಡ್ಡಿಕಾರ, ಶಿವಪುತ್ರಪ್ಪ ಹಂಪಿಹುಳಿ, ಕಣವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ರಿಯಾಜ ಕೊಡಗಾನೂರ ಹಾಗೂ ಜ್ಯೋತಿ ಹಿರೇಗೆಣ್ಣವರ ಇದ್ದರು.