ಬೆಂಗಳೂರು: ಓರ್ವ ಶಿಕ್ಷಕಿ, ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜರುಗಿದೆ. 49 ವರ್ಷದ ಸುಲೋಚನಾ ಮನೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಶಿಕ್ಷಕಿ. ಇವರು ನೆಲಮಂಗಲದ ಬಸವಣ್ಣ ದೇವರ ಮಠದ ಶಿಕ್ಷಕಿ ಎನ್ನಲಾಗಿದೆ.
Advertisement
ನೆಲಮಂಗಲದ ಭಕ್ತನಪಾಳ್ಯದ ತಮ್ಮ ಮನಯಲ್ಲಿದ್ದಾಗ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಅಲ್ಲೇ ಕುಸಿದುಬಿದ್ದು ಶಿಕ್ಷಕಿ ಸಾವನ್ನಪ್ಪಿದ್ದಾರೆ.
ಮತ್ತೊಂದು ಕೇಸ್ ನಲ್ಲಿ ಬೇಗೂರು ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದ 44 ವರ್ಷದ ನಿಜಾಮುದ್ದಿನ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ನಿಜಾಮುದ್ದೀನ್‌ಗೆ ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.