ಹೃದಯಾಘಾತ: ನಿಂತಲ್ಲೇ ಕುಸಿದು ಕ್ಯಾಬ್‌ ಚಾಲಕ ಸಾವು!

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜರುಗಿದೆ.

Advertisement

19 ವರ್ಷದ ಅಭಿಷೇಕ್‌ ಮೃತ ವ್ಯಕ್ತಿ. ಯುವಕ, ಗ್ರಾಮದ ಅನಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ತಿಳಿದು ಬಂದಿದೆ. ಅಭಿಷೇಕ್ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದ.

ಆತನನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗ ಮಧ್ಯೆಯೇ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here