ತುಮಕೂರು:- ಡ್ಯೂಟಿಯಲ್ಲಿದ್ದ ನರ್ಸ್ ಗೆ ಹೃದಯಾಘಾತ ಸಂಭವಿಸಿ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಜರುಗಿದೆ.
Advertisement
ಲತಾ (35) ಮೃತ ನರ್ಸ್. ನೈಟ್ ಶಿಫ್ಟ್ ಕೆಲಸ ಮಾಡುವಾಗಲೇ ಹೃದಯಾಘಾತ ಸಂಭವಿಸಿದೆ. ಎಸ್, ಮೃತ ಲತಾ, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಡೆಪ್ಟೇಷನ್ ಮೇಲೆ ಕೆಲಸ ಮಾಡುತ್ತಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಎದೆ ನೋವೆಂದು ಕುಸಿದು ಬಿದ್ದಿದ್ದಾರೆ. ಬಳಿಕ ಸುಮಾರು 12.10ಕ್ಕೆ ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚು ವರದಿ ಆಗುತ್ತಿದ್ದು, ಆತಂಕ ಮೂಡಿಸಿದೆ.