ರೈಲಿನಲ್ಲಿಯೇ ಹೃದಯಘಾತ: ತಿರುಪತಿಯಿಂದ ಬರುತ್ತಿದ್ದ ವ್ಯಕ್ತಿ ಸಾವು!

0
Spread the love

ಬಾಗಲಕೋಟೆ:- ತಿರುಪತಿಯಿಂದ ಕಲಾದಗಿ ಕಡೆಗೆ ಬರುತ್ತಿದ್ದ ರೈಲಿನಲ್ಲಿ ಹೃದಯಘಾತ ಸಂಭವಿಸಿ ವ್ಯಕ್ತಿಯೋರ್ವರು ಸಾವನಪ್ಪಿರುವ ಘಟನೆ ಜರುಗಿದೆ.

Advertisement

ಯಲ್ಲಪ್ಪ ಅಡಗಲ್ಲ (35) ಮೃತ ವ್ಯಕ್ತಿ. ಕಲಾದಗಿಯ ಕಟ್ಟಡ ಕಾರ್ಮಿಕನಾಗಿದ್ದ ಯಲ್ಲಪ್ಪ ಇಂದು ಬೆಳಗ್ಗೆ ತಿರುಪತಿಯಿಂದ ಹುಬ್ಬಳಿಗೆ ಬರುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಂಜಾನೆ 7:30 ರ ವೇಳೆಗೆ ಯಲ್ಲಪ್ಪ ಮೃತಪಟ್ಟಿದ್ದಾರೆ. ಸದ್ಯ ಶವ ಆಂಧ್ರಪ್ರದೇಶದ ನಂದನೂರು ರೈಲ್ವೆ ನಿಲ್ದಾಣದಲ್ಲಿ ಇಳಿಸಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸರು ಮೃತನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here