ದಾವಣಗೆರೆ: ದಾವಣಗೆರೆಯಲ್ಲಿ ಮತ್ತೊಂದು ಹೃದಯಾಘಾತದ ಘಟನೆ ಆಘಾತಕಾರಿಯಾಗಿ ಬೆಳಕಿಗೆ ಬಂದಿದೆ. ಶಕ್ತಿ ನಗರದ ನಿವಾಸಿಯಾಗಿದ್ದ ಉದ್ಯಮಿ ಅನಿಲ್ ಕುಮಾರ್ (40) ಎಂಬವರು ಎಸ್‌ಎಸ್ ರಸ್ತೆಯ ಡಿಆರ್ ಸರ್ಕಲ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
Advertisement
ಈ ದುರಂತ ಘಟನೆಯ ದೃಶ್ಯವು ಪಕ್ಕದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಇದು ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿದೆ. ಅನಿಲ್ ಕುಮಾರ್, ದಾವಣಗೆರೆಯ ಶಕ್ತಿ ನಗರದ ಪ್ರತಿಷ್ಠಿತ ಉದ್ಯಮಿಯಾಗಿದ್ದರು.
ಇವರು ವಾಕಿಂಗ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು. ವೈದ್ಯಕೀಯ ವರದಿಗಳ ಪ್ರಕಾರ, ತೀವ್ರ ಹೃದಯಾಘಾತವೇ ಅವರ ಸಾವಿನ ಕಾರಣ ಎಂದು ದೃಢಪಟ್ಟಿದೆ.