ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಹನಮಾಪುರದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ವೃದ್ಧೆ ಸಜೀವ ದಹನವಾದ ಘಟನೆ ಜರುಗಿದೆ.
Advertisement
70 ವರ್ಷದ ಪಕೀರವ್ವ ರಾಮಣ್ಣ ಆಲೂರು ಮೃತ ವೃದ್ಧೆ. ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಪಕೀರವ್ವ ಮಲಗಿದ್ದ ವೇಳೆ ಮನೆಗೆ ಆಕಸ್ಮಿಕ ಬೆಂಕಿ ತಗುಲಿದೆ.
ಬೆಂಕಿ ತಗುಲಿದ ಪರಿಣಾಮ ಪಕೀರವ್ವ ಜೀವಂತ ಸುಟ್ಟುಹೋಗಿದ್ದಾರೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


