ಬೆಂಗಳೂರು ದಕ್ಷಿಣ: ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆಯೊಂದು ಜರುಗಿದೆ. ಮಗನ ಸಾವಿಗೆ ಮನನೊಂದು ತಾಯಿ ನೇಣಿಗೆ ಶರಣಾಗಿದ್ದಾರೆ.
Advertisement
ಹೊಂಬಮ್ಮ(57) ಮೃತ ಮಹಿಳೆ. ಇವರು ಹಾರೋಹಳ್ಳಿಯ ಜನತಾ ಕಾಲೋನಿ ನಿವಾಸಿ ಎನ್ನಲಾಗಿದೆ. ವಾರದ ಹಿಂದೆ ಹೊಂಬಮ್ಮ ಮಗ ಅರುಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಗಳೂರು ಜಿಲ್ಲೆ ಬೆಳ್ತಂಗಡಿಯಲ್ಲಿ ಸಾವಿಗೆ ಶರಣಾಗಿದ್ದ. ಶುಕ್ರವಾರ ಮಗನ ತಿಥಿ ಕಾರ್ಯ ಮಾಡಿ ಬಳಿಕ ತಾಯಿ ಹೊಂಬಮ್ಮ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.