ಮನಕಲಕುವ ಘಟನೆ: ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

0
Spread the love

ಅಮರಾವತಿ:- ಜಿಲ್ಲೆಯ ಬುಕ್ಕರಾಯಸಮುದ್ರಂ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ ಶಾಲೆಯ ಅಡುಗೆಮನೆಯಲ್ಲಿ ಇಟ್ಟಿದ್ದ ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ತೀವ್ರ ಗಾಯಗೊಂಡು ಮೃತಪಟ್ಟಿದೆ. ಗ್ರಾಮದ ಅಂಬೇಡ್ಕರ್ ಗುರುಕುಲ ಶಾಲೆಯಲ್ಲಿ ಘಟನೆ ಸಂಭವಿಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

Advertisement

ಅಕ್ಷಿತಾ ಮೃತ ಮಗು. ಮಗುವಿನ ತಾಯಿ ಕೃಷ್ಣವೇಣಿ ಶಾಲೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ಧಪಡಿಸಿದ್ಧ ಬಿಸಿ ಹಾಲನ್ನು ತಣ್ಣಗಾಗಿಸಲು ಸೀಲಿಂಗ್ ಫ್ಯಾನ್ ಅಡಿಯಲ್ಲಿ ಇಡಲಾಗಿತ್ತು. ತಾಯಿ ಅಡುಗೆಮನೆಯಲ್ಲಿ ಇಲ್ಲದ ವೇಳೆ ಬೆಕ್ಕನ್ನು ಹಿಂಬಾಲಿಸಿಕೊಡು ಹೋದ ಮಗು ಕುದಿಯುತ್ತಿದ್ದ ಹಾಲಿನ ಪಾತ್ರೆಯೊಳಗೆ ಬಿದ್ದಿದೆ.

ಬಿಸಿ ಹಾಲಿನ ಪಾತ್ರೆಗೆ ಬಿದ್ದ ಪರಿಣಾಮ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವಿನ ಕಿರುಚಾಟ ಕೇಳಿದ ತಾಯಿ ಕೃಷ್ಣವೇಣಿ, ಕೂಡಲೇ ಮಗುವನ್ನು ಪಾತ್ರೆಯಿಂದ ಹೊರತೆಗೆದು ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಶಿಫಾರಸಿನ ಮೇರೆಗೆ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.


Spread the love

LEAVE A REPLY

Please enter your comment!
Please enter your name here