ಬೆಂಗಳೂರು ಗ್ರಾಮಾಂತರ:- ಜನ್ಮ ಪಡೆದ ಕೆಲವೇ ವಾರಗಳಲ್ಲಿ ಬೀದಿಗೆ ಬಿದ್ದ ನವಜಾತ ಶಿಶುವನ್ನು ಸ್ಥಳೀಯರು ರಕ್ಷಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ತಿರುಮಗೊಂಡನಹಳ್ಳಿ – ಹಾಡೋನಹಳ್ಳಿ ಮಧ್ಯೆ ಇರುವ ಲೇಔಟ್ ಬಳಿ ಜರುಗಿದೆ.
Advertisement
ಪಾಪಿಗಳು, ಗಂಡು ಮಗುವನ್ನ ಲೇಔಟ್ ನಲ್ಲಿ ಬಿಸಾಡಿ ಹೋಗಿದ್ದರು. ಮಗು ಅಳುವುದನ್ನು ಕಂಡ ತಿರುಮಗೊಂಡನಹಳ್ಳಿ ಯುವಕರು ನವಜಾತ ಶಿಶುವನ್ನು ಪತ್ತೆಹಚ್ಚಿ ಹಾರೈಕೆ ಮಾಡಿದ್ದಾರೆ. ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಇನ್ನೂ ಇದೇ ವೇಳೆ ಮಗುವಿಗೆ ಹಾಲುಣಿಸಿ ಗ್ರಾಮದ ಆಂಜಿನಮ್ಮ ಕುಟುಂಬ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಈ ಘಟನೆ ಜರುಗಿದೆ.


