ತುಮಕೂರು:– ದೀಪಾವಳಿ ಹಬ್ಬದ ಸಂಭ್ರಮದ ನಡುವೆ ನೀರಿನಲ್ಲಿ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಶ್ರಾವ್ಯಾ (12), ಪುಣ್ಯಾ (12) ಮತ್ತು ತಂದೆ ವೆಂಕಟೇಶ್ (50) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಶ್ರಾವ್ಯಾ ಶೌಚಾಲಯ ಬಳಿಯ ಮೂತ್ರ ವಿಸರ್ಜನೆ ವೇಳೆ ಕಾಲು ಸ್ಲಿಪ್ ಆಗಿ ಕೆರೆಗೆ ಬಿದ್ದಳು. ಅವಳನ್ನು ರಕ್ಷಿಸಲು ಪುಣ್ಯಾ ಹಾರಿ, ನಂತರ ತಂದೆ ವೆಂಕಟೇಶ್ ಕೂಡ ನೀರಿನಲ್ಲಿ ಹಾರಿ ಪ್ರಯತ್ನಿಸಿದರು. ಆದರೆ ಮೂವರಿಗೆ ಈಜು ಬಾರದ ಕಾರಣ ಅವರು ನೀರಲ್ಲಿ ಮುಳುಗಿ ಮೃತಪಟ್ಟರು.
ಈ ಘಟನೆ ನಿನ್ನೆ ಸಂಜೆ 4:30 ಗಂಟೆಗೆ ಸಂಭವಿಸಿದೆ. ಮೂವರ ಮೃತದೇಹಗಳನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ಕಳುಹಿಸಲಾಗಿದೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.
ಸ್ಥಳೀಯರು ಮತ್ತು ಗ್ರಾಮಸ್ಥರು ಈ ದುರ್ಘಟನೆಗೆ ಶಾಕ್ ಆಗಿದ್ದು, ಹಬ್ಬದ ಸಂತೋಷದ ನಡುವೆ ಈ ಘಟನೆ ಎಲ್ಲರ ಮನಸ್ಸಿನಲ್ಲಿ ದುಃಖ ಮೂಡಿಸಿದೆ.



