ಸತತವಾಗಿ ಸುರಿಯುತ್ತಿರುವ ಮಳೆ: ಏಕಾಏಕಿ ಬಿದ್ದ ಬೃಹತ್ ಗಾತ್ರದ ಮರ

0
Spread the love

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ಬೃಹತ್ ಗಾತ್ರದ ಮರ ಹಾಗೂ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಹುಬ್ಬಳ್ಳಿ ನಗರದ ವಿದ್ಯಾ ನಗರದಲ್ಲಿ ಶಾಲೆಯ ಬಳಿ ಬೃಹತ್ ಗಾತ್ರದ ಮರ ಏಕಾಏಕಿ ಬಿದ್ದಿದೆ.

Advertisement

ದಾರಿಹೋಕುರ ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದು, ಮರ ನೆಲಕ್ಕೆ ಉರುಳುವ ದೃಶ್ಯ ಸಿಟಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಾದ್ಯಂತ ಒಂದೇ ದಿನದಲ್ಲಿ ಹತ್ತಾರು ಮನೆಗಳು ಧರೆಗುರುಳಿವೆ.


Spread the love

LEAVE A REPLY

Please enter your comment!
Please enter your name here