ಮಂಗಳೂರು:- ಮಂಗಳೂರು ಹೊರವಲಯದಲ್ಲಿರುವ ಯಯ್ಯಾಡಿ ಕೊಂಚಾಡಿಯಲ್ಲಿ ಭೀಕರ ಮಳೆಯ ಕಾರಣ ಜಲಸ್ಫೋಟವುಂಟಾಗಿ ಗುಡ್ಡ ಕುಸಿದಿದೆ.
ಮನೆ ಹಿಂಭಾಗ ಒಂದರಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಮಣ್ಣು ಮತ್ತು ಗಿಡಗಳು ಉರುಳಿ ಬಂದು ಮನೆಯ ಸ್ಟೇರ್ ಕೇಸ್ ಭಾಗಕ್ಕೆ ಹಾನಿಯನ್ನುಂಟು ಮಾಡಿವೆ. ಅದೃಷ್ಟವಶಾತ್ ಮನೆಯಲ್ಲಿರುವವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಕಲ್ಲು, ಮಣ್ಣು ಮತ್ತು ಗಿಡಗಳು ಮನೆ ಅಂಗಳಕ್ಕೆ ನುಗ್ಗಿ ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನೂ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆ ಸಾಕಷ್ಟು ಅನಾಹುತಗಳಿಗೂ ಕಾರಣವಾಗುತ್ತಿದೆ.



