ಬೆಂಗಳೂರು;- ಕರ್ನಾಟಕದಲ್ಲಿ ಅಕ್ಟೋಬರ್ 29ರಿಂದ ನ. 1 ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
Advertisement
ಕೆಲವು ರಾಜ್ಯಗಳಲ್ಲಿ ಅ. 21ರಿಂದಲೇ ಹಿಂಗಾರು ಮಳೆಯ ಪ್ರವೇಶವಾಗಿದೆ. ಇದರೊಂದಿಗೆ ಹಮೂನ್ ಚಂಡಮಾರುತ ಹಾಗೂ ತೇಜ್ ಚಂಡಮಾರುತವೂ ಎದ್ದಿರುವುದರಿಂದ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಾಗಲಿದೆ.
ಅಕ್ಟೋಬರ್ 29ರಿಂದ ನವೆಂಬರ್ 1ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.